ಬೆಂಗಳೂರು: ಪಾಕಿಸ್ತಾನ ವಿರುದ್ಧ ಪಂದ್ಯ ಗೆದ್ದು ಇಡೀ ಭಾರತವನ್ನ ಗೆಲ್ಲಿಸಲಿ ಎಂದು ಸಚಿವ ಸುನೀಲ್ ಕುಮಾರ್ ಶುಭಕೋರಿದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಾರತ ಗೆದ್ದು ಬರಲಿ, ಎಲ್ಲಾ ಹಂತದಲ್ಲಿ ಭಾರತ ತನ್ನ ಪ್ರದರ್ಶನವನ್ನ ತೋರಿದೆ.
ಸಹಜವಾಗಿ ಕುತೂಹಲ ನಿರೀಕ್ಷೆ ಆಸಕ್ತಿ ಇರುತ್ತೆ ಕನ್ನಡನಾಡಿನ ಪರವಾಗಿ ಶುಭಕೋರುತ್ತೇನೆ ಎಂದರು.
ಕನ್ನಡಕ್ಕೆ ನಾವು ವಿಶೇಷ ಅಭಿಯಾನ ರಾಜ್ಯಾದ್ಯಂತ ಆರಂಭ ಆಗಿದೆ. ಮಾತಾಡ್ ಮಾತಾಡ್ ಸಂಕಲ್ಪ ಇಟ್ಟಕೊಂಡು ನವೆಂಬರ್ 1ರವರೆಗೂ ಅಭಿಯಾನ ಇರುತ್ತೆ,ರಾಜ್ಯದಲ್ಲಿ ಬೇರೆ ಭಾಷೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕನ್ನಡ ಬೆಳೆಸಬೇಕಾಗಿದೆ.ಒಂದು ವಾರಗಳ ಕಾಲ ಕನ್ನಡಕ್ಕಾಗಿ ಅಭಿಯಾನ ಆರಂಭ ಆಗಿದೆ ನಾವು ಕುಟುಂಬದ ಸದಸ್ಯರ ಜೊತೆಗೆ ಕನ್ನಡ ಮಾತಾಡೋಣ.ಮಕ್ಕಳು ಹಾಗೂ ಕುಟುಂಬದ ನಡುವೆ ಕನ್ನಡ ಮಾತನಾಡುವುದು ಕಡಿಮೆ ಆಗ್ತಿದೆ
ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಮಾಡೋಣ, ಚರವಾಣಿ ಕನ್ನಡದಲ್ಲೇ ಕಳುಹಿಸುವ ಅಭ್ಯಾಸ ಮಾಡೋಣ
ಎಲ್ಲಾ ಜಿಲ್ಲಾ,ತಾಲೂಕಿನಲ್ಲಿ ಕನ್ನಡ ಸಾಮೂಹಿಕ ಗಾಯನ ಹಮ್ಮಿಕೊಂಡಿದ್ದೇವೆ. ಕನ್ನಡದ ಮೂರು ಗೀತೆ ಹಾಡನ್ನು ಪ್ರತಿಯೊಬ್ಬರೂ ಹಾಡಬೇಕು
ಕನ್ನಡದ ಪ್ರೇಮ ಭಾಷಣದ ವಸ್ತು ಅಲ್ಲ, ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಭಿಯಾನ ಮಾಡ್ತಿದ್ದೇವೆ ಎಂದರು.
ಕನ್ನಡದಲ್ಲಿ ಸಹಿ ಅಭಿಯಾನ ವಿಚಾರವಾಗಿ ಮಾತನಾಡಿದ ಅವರು
ಕನ್ನಡದಲ್ಲಿ ಸಹಿ ಹಾಗೂ ಸುತ್ತೂಲೆ ಎರಡು ಕನ್ನಡದಲ್ಲೇ ಆಗಬೇಕು
ಇದಕ್ಕೆ ನನ್ನ ಬೆಂಬಲವಿದೆ. ಈ ಅಭಿಯಾನದ ಮೂಲಕ ಹೊಸ ರೂಪ ಪಡೆದುಕೊಂಡಿದೆ ಸ್ಪಷ್ಟಪಡಿಸುತ್ತೇನೆ.ಹಿಂದೆ ಯಾವ ರೀತಿ ಇತ್ತು ಅನ್ನೋ ಚರ್ಚೆಬೇಡ
ಮುಂದೆ ಯಾವರೀತಿ ಆಗಬೇಕು ಅನ್ನೋದನ್ನ ಚರ್ಚೆ ಮಾಡೋಣ ಎಂದರು.
ಇನ್ನೂ ಮೆಟ್ರೋದಲ್ಲಿ ಕನ್ನಡ ಕಡಗಣನೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಬಾರಿ ವ್ಯತ್ಯಾಸ ಆಗಿತ್ತು,ಆ ಅಧಿಕಾರಿಗಳಿಗೆ ನೊಟೀಸ್ ನ್ನ ಕೊಟ್ಟಿದ್ದೇವೆ. ಇನ್ಮುಂದೆ ಆ ರೀತಿ ಆಗದಂತೆ ಎಚ್ಚರಿಕೆವಹಿಸುತ್ತೇವೆ ಎಂದರು. ರಾಜ್ಯದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡ ಕಡಗಣನೆ ವಿಚಾರವಾಗಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಕನ್ನಡವೇ ಅಳವಡಿಸಬೇಕು ನಾವೂ ಕೂಡ ಹತ್ತಾರು ಬಾರಿ ಮನವಿ ಕೂಡ ಮಾಡಿದ್ದೇವೆ ಎಂದರು.