Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶರಣ ಸಂಸ್ಕೃತಿ ಉತ್ಸವ – 2023 : ಪೂರ್ವಸಿದ್ಧತಾ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯಿತು ? ಇಲ್ಲಿದೆ ಮಾಹಿತಿ…!

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಸೆ. 21 – ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠ ಬುಧವಾರ (ಸೆಪ್ಟೆಂಬರ್.20) ನಡೆದ ಪೂರ್ವಸಿದ್ಧತಾ ಸಭೆಯಲ್ಲಿ 2023ನೇ ಸಾಲಿನ ಶರಣಸಂಸ್ಕøತಿದ ಕಾರ್ಯಕ್ರಮಗಳ ರೂಪುರೇಷೆ ಕುರಿತು ಚರ್ಚಿಸಲಾಯಿತು.

ಉತ್ಸವದ ಗೌರವಾಧ್ಯಕ್ಷರಾದ ಶ್ರೀ ಶಿವಬಸವ ಸ್ವಾಮಿಗಳು ಮಾತನಾಡಿ, ಶೃಂಗೇರಿ ಮಠ ಹಾಗೂ ಮುರುಘಾಮಠಕ್ಕೆ ಬ್ರಿಟೀಷ್ ಸರ್ಕಾರ ಜಗದ್ಗುರು ಪದವಿ ನೀಡುತ್ತದೆ. ಶ್ರೀಮಠವು ಅನೇಕ ಅಂಧ ಸಂಪ್ರದಾಯಗಳನ್ನು ತೊಡೆದು ಹಾಕಲು ಶ್ರಮಿಸುತ್ತಿದೆ. 12ನೇ ಶತಮಾನದ ವೈಚಾರಿಕ ಚಿಂತನೆಗಳನ್ನು ಮುಂದುವರಿಸಿಕೊಂಡು ಬಂದಿದೆ. ಈ ಬಾರಿಯ ಉತ್ಸವವನ್ನು ಸರಳವಾಗಿ ಅರ್ಥಪೂರ್ಣವಾಗಿ ಖರ್ಚುವೆಚ್ಚ ಹೊರೆಯಾಗದ ಹಾಗೆ ಮಾಡಬೇಕಿದೆ ಎಂದರು.

ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಶರಣಸಂಸ್ಕøತಿ ಉತ್ಸವ ಚಿತ್ರದುರ್ಗದ ವಿವಿಧ ಭಾಗಗಳಿಂದ ಆಚರಿಸುತ್ತ ಬಂದು ಇಂದು ಶ್ರೀಮಠದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಈ ವೇದಿಕೆ ಅನೇಕ ಸಾಧಕರಿಗೆ ಅವಕಾಶ ಕಲ್ಪಿಸಿದೆ. ಈ ಪರಂಪರೆ ಹಾಗೆಯೇ ಮುಂದುವರಿಯಬೇಕು. ನಮ್ಮಂತಹ ಎಲ್ಲ ಸ್ವಾಮಿಗಳು ಇಲ್ಲಿಯ ತ್ರಿವಿಧ ದಾಸೋಹಕ್ಕೆ ಭಾಜನರಾಗಿದ್ದು, ನಮಗೆ ಯಾವೊತ್ತು ಶ್ರೀಮಠದ ಮೇಲೆ ಕೃತಜ್ಞತಾ ಭಾವ ಇದೆ ಎಂದರು.

ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಕೆ.ಸಿ. ನಾಗರಾಜು ಅವರನ್ನು ಈ ಬಾರಿಯ ಶರಣಸಂಸ್ಕøತಿ ಉತ್ಸವದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಅಕ್ಟೋಬರ್ 21 ರಿಂದ 25ರವರೆಗೆ ಐದುದಿನಗಳ ಕಾಲ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಎಂ.ಕೆ. ತಾಜಪೀರ್ ಮಾತನಾಡಿ, ಶ್ರೀಮಠಕ್ಕೆ ಎಲ್ಲ ಧರ್ಮೀಯರು ಭಕ್ತಿಯಿಂದ ಭೇಟಿ ನೀಡುತ್ತಾರೆ. ನಮ್ಮಂಥವರಿಗೆ ಶ್ರೀಮಠವು ಅವಕಾಶ ಮಾಡಿಕೊಟ್ಟಿದೆ. ನಾವು ಶರಣಸಂಸ್ಕøತಿ ಉತ್ಸವದಿಂದ ದೂರ ಉಳಿಯಬಾರದು. ಯುವಕರಿಗೆ ರೈತರಿಗೆ ಅನುಕೂಲವಾಗುವ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶ್ರೀಮಠವು ಯಾವುದೇ ಸಮಾಜಕ್ಕೆ ಸೀಮಿತವಾದುದಲ್ಲ. ಇದು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಹೇಳಿದರು.

ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಡಾ. ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ವೇದಿಕೆಯಲ್ಲಿದ್ದರು.

ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು ಹೊಸಮಠ ಹಾವೇರಿ, ಶ್ರೀ ಚೆನ್ನಬಸವ ಸ್ವಾಮಿಗಳು ಶಿಕಾರಿಪುರ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಿಪ್ಪಾಣಿ, ಶ್ರೀ ಬಸವ ಹರಳಯ್ಯ ಸ್ವಾಮಿಗಳು, ಐಮಂಗಲ, ಶ್ರೀ ಅನ್ನದಾನಿಭಾರತಿ ಬಸವಪ್ರಿಯ ಹಪ್ಪಣ್ಣ ಸ್ವಾಮಿಗಳು ತಂಗಡಗಿ, ಶ್ರೀ ಬಸವಪ್ರಸಾದ ಸ್ವಾಮಿಗಳು ಶಿವಶಕ್ತಿಪೀಠ ಇರಕಲ್, ಶ್ರೀ ಪ್ರಭುಲಿಂಗ ಸ್ವಾಮಿಗಳು ಜಗಳೂರು, ಶ್ರೀ ತಿಪ್ಪೇರುದ್ರಸ್ವಾಮಿಗಳು ಹೊಳವನಹಳ್ಳಿ, ಶ್ರೀ ಮುರುಘೇಂದ್ರ ಸ್ವಾಮಿಗಳು, ಎನ್.ಬಿ. ವಿಶ್ವನಾಥಯ್ಯ, ಕೆ.ಎಂ. ವೀರೇಶ್, ನಿರಂಜನಮೂರ್ತಿ, ಎ.ಎನ್. ಮೂರ್ತಿ, ಖಾಸಿಂ ಅಲಿ, ಫಾತ್ಯರಾಜನ್ ಇದ್ದರು. ಷಡಾಕ್ಷರಯ್ಯ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!