Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಟೀಲ್ ವೈಯಕ್ತಿಕ ನಿಂದನೆ ಮಾಡಿಲ್ಲ :ಪ್ರಹ್ಲಾದ್ ಜೋಶಿ

Facebook
Twitter
Telegram
WhatsApp

ಹುಬ್ಬಳ್ಳಿ: ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್​ ಕಟೀಲ್ ಡ್ರಗ್ ಪೆಡ್ಲರ್ ಹೇಳಿಕೆ‌ಗೆ ಪ್ರತಿಕ್ರಿಯೆ ನೀಡಿದ ಜೋಶಿ, ಕಟೀಲ್ ಯಾಕೆ ಈ ರೀತಿ ಮಾತಾಡಿದ್ದಾರೆ ಗೊತ್ತಿಲ್ಲ. ಆದರೆ, ಪತ್ರಿಕೆಯಲ್ಲಿ ಬಂದಿದೆ ಎಂದಿದ್ದಾರೆ. ಆ ಬಗ್ಗೆ ನಾನು ಮಾತನಾಡಲ್ಲ. ಕೇವಲ ಕಟೀಲ್ ವೈಯಕ್ತಿಕ ನಿಂದನೆ ಮಾಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. 2014, 2018 ಹಾಗೂ 2019ರ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಹೀನಾಯ ಸೋಲಾಗಿದೆ. ಆದರೂ ಅವರು ಮೋದಿ ಬಗ್ಗೆ ಮಾತಾಡ್ತಾರೆ. ಯಾರೇ ಇರಲಿ ಕೆಳ ಮಟ್ಟದ ಟೀಕೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಎರಡೂ ಕಡೆ ನಾವು ಖಂಡಿತ ಗೆಲ್ತೇವೆ. ನಾನು ಹಾನಗಲ್​ಗೆ ಹೋಗಿ ಬಂದಿದ್ದೇನೆ. ಸಿಂದಗಿಗೆ ಹೋಗಿಲ್ಲ. ಅಲ್ಲಿಯ ಕಾರ್ಯಕರ್ತರ ಜೊತೆ, ಉಸ್ತುವಾರಿಗಳ ಜೊತೆ ಸಂಪರ್ಕದಲ್ಲಿ ಇದ್ದೇನೆ. ಪೆಟ್ರೋಲ್ ಡೀಸೆಲ್ ದರ ಚುನಾವಣೆ ಮೇಲೆ ಎಫೆಕ್ಟ್ ಬಿರೋಲ್ಲ. ಆಗಲೂ ನಮಗೆ‌ ಜನ ವೋಟು ಹಾಕಿದ್ದಾರೆ, ‌ಬೇರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಯಾರು ವಿಶ್ಚಾಸಾರ್ಹರು ಎಂದು ಜನರಿಗೆ ಗೊತ್ತಿದೆ ಎಂದರು.

ಉಪ ಚುನಾಣೆಯಲ್ಲಿ ಹಣ‌ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಇದು ಸುಳ್ಳು ಆರೋಪ. ಕಾಂಗ್ರೆಸ್​​ನವರು ಸತ್ಯ ಹರಿಶ್ಚಂದ್ರರಾ? ಕಾಂಗ್ರೆಸ್​​ನವರು ಇಷ್ಟೆಲ್ಲಾ ಟೆಂಟ್ ಹಾಕಿದ್ದಾರೆ. ಅವರು ಹಣ ಖರ್ಚೇ ಮಾಡ್ತಿಲ್ವಾ? ಅಗತ್ಯವಿರುವ ದುಡ್ಡು ಅವರು ಖರ್ಚು ಮಾಡುತಿದ್ದಾರೆ, ನಾವು ಮಾಡ್ತಿದೇವೆ ಎಂದರು.ಬಾಂಗ್ಲಾ ಹಿಂದೂಗಳ ಹಿತ ಕಾಪಾಡಲು ಭಾರತ ಸರ್ಕಾರ ಬದ್ಧ
ಬಾಂಗ್ಲಾ‌ದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಲ್ಲಿನ ಸರ್ಕಾರದ ಜೊತೆ ನಮ್ಮ ಸರ್ಕಾರ‌‌ ಸಂಪರ್ಕದಲ್ಲಿದೆ. ಅಲ್ಲಿಯ ಸರ್ಕಾರ ಕೂಡಾ ಕ್ರಮ ಕೈಗೊಳ್ಳುತ್ತಿದೆ. ಭಾರತ ಸರ್ಕಾರ ಅಲ್ಲಿಯ ಹಿಂದೂಗಳ ಹಿತ ಕಾಪಾಡಲು ಬದ್ಧವಾಗಿದೆ ಎಂದು ತಿಳಿಸಿದರು.ಕಲ್ಲಿದ್ದಲು ಸ್ವಲ್ಪ ಕೊರತೆಯಾಗಿತ್ತು. ಪ್ರತಿ ದಿನ 2.1 ಮಿಲಿಯನ್ ಪೂರೈಕೆ ಮಾಡುತಿದ್ದೇವೆ. ನಾಲ್ಕು ದಿನಗಳ ಸ್ಟಾರ್ ಇದ್ದು, ಅದು ಪೈಲ್​ ಅಪ್​ ಆಗೋಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!