Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೊತೆಗೆ ಸಾಹಿತ್ಯ ಹವ್ಯಾಸ ರೂಢಿಸಿಕೊಳ್ಳಬೇಕು : ಕೊರ್ಲಕುಂಟೆ ತಿಪ್ಪೇಸ್ವಾಮಿ

Facebook
Twitter
Telegram
WhatsApp

ಚಳ್ಳಕೆರೆ, (ಅ.23) :  ಸಂಸ್ಕೃತ ಭಾಷೆಯನ್ನು ಜೀರ್ಣಿಸಿಕೊಂಡು ಬೆಳೆದಿರುವ ಕನ್ನಡ ಭಾಷೆಗೆ ಗಟ್ಟಿತನವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ತಳಕು ಗ್ರಾಮದ ಎಸ್‍ಜಿಟಿ ಸರ್ಕಾರಿ ಪದವಿ ಪೂರ್ವ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಜಿಲ್ಲಾ ನೌಕರರ ಸಂಘ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಆಶುಭಾಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯ ವಿಷಯಗಳ ಅಧ್ಯಯನ ಜತೆ ಸಾಹಿತ್ಯ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಪ್ರತಿಯೊಂದು ವಿಷಯವನ್ನು ಪರಿಪೂರ್ಣ ಮನವರಿಕೆ ಮಾಡಿಕೊಳ್ಳಲು ಮಾನಸಿಕ ವಿಶಾಲತೆ ಬೆಳೆಯುತ್ತದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ನವ ಜಾಗೃತಿ ವೇದಿಕೆ ಕಾರ್ಯದರ್ಶಿ ಯಾದಲಗಟ್ಟೆ ಜಗನ್ನಾಥ ಮಾತನಾಡಿ, ಇತಿಹಾಸ ಪುರುಷ ಮದಕರಿ ನಾಯಕನ ಸಾಹಸ ಮತ್ತು ಆಡಳಿತವನ್ನು ವಿಶ್ವಕ್ಕೆ ತಿಳಿಸಿದ ಕೀರ್ತಿ ತರಾಸು ಅವರಿಗೆ ಸಲ್ಲುತ್ತದೆ. ದುರ್ಗಾಸ್ತಮಾನ ಕಾದಂಬರಿಯನ್ನು ಆನೆಯ ಮೇಲೆ ಮೆರವಣಿಗೆ ಮಾಡಿ ಲೋಕಾರ್ಪಣೆಗೊಳಿಸಿರುವ ಹಿರಿಮೆ ಇದೆ. ಸಾಹಿತ್ಯ ವಲಯಕ್ಕೆ ಅಪಾರ ಕೊಡುಗೆ ನೀಡಿರುವ ತಳುಕು ಮತ್ತು ಬೆಳಗೆರೆ ಮನೆತನಗಳ ಸಾಧಕರ ಆದರ್ಶವನ್ನು ವಿದ್ಯಾರ್ಥಿಗಳು ತಿಳಿಯಬೇಕು. ಸಾಹಿತ್ಯ, ಸಾಂಸ್ಕøತಿಕ ಸಿರಿವಂತಿಕೆಯ ತಾಲೂಕಿನ ವಾರಸುದಾರರಾಗಿ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು ಎಂದು ಹೇಳಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರ ಜಿಲ್ಲಾ ಸಮಿತಿ ಸದಸ್ಯೆ ದಯಾಪುತ್ತೂರ್ಕರ್ ಮಾತನಾಡಿ, ಭಾಷಾ ಬೆಳವಣಿಗೆಗೆ ದೇಶದಲ್ಲೆ ಸಂಸ್ಥೆ ಸ್ಥಾಪನೆ ಇರುವುದು ರಾಜ್ಯದಲ್ಲಿ ಮಾತ್ರ. ಪ್ರಾಧಿಕಾರದ ವತಿಯಿಂದ ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಸಲುವಾಗಿ ಜಾನಪದ ಗೀತೆ, ಆಶುಭಾಷಣ, ಕನ್ನಡ ಪ್ರಬಂಧ ಹಾಗೂ ವಿವಿಧ ಸಾಹಿತ್ಯ ರಚನೆಗಳ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು.
ವಿಜೇತರು: ಆಶುಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 19 ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮಹತ್ವ ಕುರಿತು ಮಾತನಾಡಿದ ವಿದ್ಯಾರ್ಥಿ ಯಶವಂತ್ ಪ್ರಥಮ, ರೈತರ ಜೀವನ ಕುರಿತು ಶೋಭಾ ದ್ವಿತಿಯ, ಅರಣ್ಯ ರಕ್ಷಣೆ ವಿಷಯದಲ್ಲಿ ಹೇಮಶ್ರೀ ತೃತೀಯ ಸೇರಿದಂತೆ ಆರ್. ಮಂಜುನಾಥ, ವಿನುತ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ, ಖಾಸಗಿ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಗೌರೀಶ, ಉಪಪ್ರಾಚಾರ್ಯ ಎಚ್. ಚಂದ್ರಹಾಸ, ಶಿಕ್ಷಕರಾದ ಕೆ.ಎ. ಮೂರ್ತಪ್ಪ, ಡಿ.ಶಫೀವುಲ್ಲಾ, ಎನ್. ಶಿವಮೂರ್ತಿ, ವಿ.ವೀರಣ್ಣ, ಪಿ. ವೀಣಾ, ಜೆ. ರಾಧಾಮಣಿ, ಪಿ. ಮೂರ್ತಚಾರ್, ಎಸ್. ರಂಗಸ್ವಾಮಿ, ಕೆ. ಕರಿಬಸಪ್ಪ, ಎನ್. ನಾಗಲಕ್ಷ್ಮಿ, ವಿ. ಪ್ರಭಾ, ಎ.ಗೀತಾ, ಎ.ಟಿ. ರೇಣುಕಾ, ಜ್ಯೋತಿ ಮತ್ತಿತತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!