ನವದೆಹಲಿ: ಇಂದು ಹಲವು ದೇಶಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆ ಪ್ರಮುಖ ನಿರ್ಧಾರಗಳು ಈ ಕೆಳಗಿನಂತಿವೆ.
* ಆಹಾರ ಭದ್ರತೆ ಕುರಿತಾದ ಘೋಷಣೆಗಳು
* ಹಸಿರು ಅಭಿವೃದ್ಧಿ ಒಪ್ಪಂದ
* ಅಂತರ್ಗತ ಬೆಳವಣಿಗೆ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿ
* ಆರ್ಥಿಕ ಒಳಗೊಳ್ಳುವಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ನೀತಿ
* ಗುಣಮಟ್ಟದ ಶಿಕ್ಷಣ ನೀಡುವುದು
* ಜಾಗತಿಕವಾಗಿ ಆರೋಗ್ಯವನ್ನು ಬಲಪಡಿಸುವುದು
* ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಡುವುದು
* ಪ್ಲಾಸ್ಟಿಕ್ ಮಾಲಿನ್ಯ ತಡೆಯುವುದು
* ನಗರಗಳಾಗಿ ಬೆಳೆಯುವ ಪ್ರದೇಶಗಳಿಗೆ ಹಣಕಾಸು ಒದಗಿಸುವುದು
* ವಿಪತ್ತು ಅಪಾಯವನ್ನು ಕಡಿಮೆ ಮಾಡುವುದು
* ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಸುಧಾರಿಸುವುದು
* ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ, ಭದ್ರತೆ, ವಿಶ್ವಾಸವನ್ನು ಸೃಷ್ಟಿಸುವುದು
* ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ ಮಾಡುವುದು
* ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಗುರಿ ಹೊಂದುವುದು
* ಭಯೋತ್ಪಾದನೆ ಮತ್ತು ಮನಿ ಲ್ಯಾಂಡ್ರಿಂಗ್ ಅನ್ನು ನಿಯಂತ್ರಣ ಮಾಡುವುದು. ಹೀಗೆ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.