ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಆ.30) : ಸಹೋದರ ಸಹೋದರಿಯರ ಬಂಧವನ್ನು ನೂಲಿನಲ್ಲಿ ಮತ್ತಷ್ಠು ಮಗದಷ್ಟು ಬಿಗಿಯಾಗಿಸುವ ಹಬ್ಬ ರಕ್ಷಾ ಬಂಧನವಾಗಿದೆ ಎಂದು ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಾಬುಲಾಲ್ ಪಟಿಯಾರ್ ತಿಳಿಸಿದರು.
ನಗರದ ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ 50ನೇ ವರ್ಷದ ರಕ್ಷಾ ಬಂಧನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಹೋದರ ಸಹೋದರಿಯರ ನಡುವೆ ಒಬ್ಬರಿಗೊಬ್ಬರು ರಕ್ಷಣೆಯ ಜವಾಬ್ದಾರಿ, ಗೌರವ, ಕಷ್ಟ ಕಾಲದಲ್ಲಿ ಬಿನ್ನಿಗೆ ನಿಲ್ಲುವ ಭಾಂದವ್ಯ ಪ್ರತೀಕವಾದ ರಾಖಿಗಳು ನಲಿದಾಡುವ ಹೋತ್ತು ಇದಾಗಿದೆ ಎಂದರು.
ಅಕ್ಕ-ತಮ್ಮನಿಗೆ ತಂಗಿ ಅಣ್ಣನಿಗೆ ಅಯುಷ್ಯವನ್ನು, ಸಂತೋಷವನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿ ಹಣೆಗೆ ತಿಲಕವನ್ನು ಇಟ್ಟು ಸಹೋದರನ ಮುಂಗೈಗೆ ರಾಖಿ ಅಥವಾ ಪವಿತ್ರವಾದ ದಾರವನ್ನು ಕಟ್ಟುವ ಕ್ರಮ ಭಾಂಧವ್ಯದ ದ್ಯೋತಕ. ಅದೇ ರೀತಿ ರಾಖಿ ಕಟ್ಟಸಿಕೊಂಡ ಸಹೋದರ ನಿನ್ನ ರಕ್ಷಣೆ ನನ್ನದೇ ಎಂದು ಅವಳಿಗೆ ಮಾತು ಕೂಟ್ಟು ಉಡುಗೊರೆ ಸಿಹಿ ತಿಂಡಿ ಚಾಕೋಲೇಟ್ ಹೀಗೆ ಪ್ರೀತಿಯಿಂದ ಏನಾನ್ನಾದರೂ ಕೂಡುವ ರೂಢಿ ಇತ್ತೀಚೇಗೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಕುಮಾರ್, ಉಪಾಧ್ಯಕ್ಷರಾದ ಉತ್ತಮ ಚಂದ್ ಸುರಾನ್, ಕೋಶಾಧ್ಯಕ್ಷ ರಾಜೇಂದ್ರ, ನಿರ್ದೇಶಕರಾದ ಜಗರಿಲಾಲ್, ಸಲಹಾ ಸಮಿತಿ ಸದಸ್ಯರಾದ ಜೀಸುಲಾಲ್ ಜೈನ್, ಶಾಂತಿಲಾಲ್ ಜೈನ್ ಸೇರಿದಂತೆ ಶಾಲೆಯ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.