ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಆ. 30) : ರೋಟರಿಕ್ಲಬ್, ಚಿತ್ರದುರ್ಗ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ರೋಟರಿ ಕ್ಲಬ್ ಚಿನ್ಮೂಲಾದ್ರಿ, ಚಿತ್ರದುರ್ಗ ಇವರ ವತಿಯಿಂದ ಬ್ರಹ್ಮಕುಮಾರಿ ರಾಜಯೋಗಿನಿ ಜಯಂತಿ ಅಕ್ಕನವರಿಗೆ ಗೌರವಪೂರ್ವಕವಾಗಿ ಜ್ಞಾನರತ್ನ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಬ್ರಹ್ಮಕುಮಾರಿ ರಾಜಯೋಗಿನಿ ಜಯಂತಿ ಅಕ್ಕನವರು ಪವಿತ್ರ ಭಾರತ ದೇಶವನ್ನು ಸ್ವರ್ಗವನ್ನಾಗಿ ಮಾಡಲು, ಅಕ್ಕನವರೇ ತಮ್ಮ ನಿಸ್ವಾರ್ಥ ಸೇವೆಯೇ ಭರತ ಭೂಮಿಗೆ ಆಶಾಕಿರಣವಾಗಿದೆ. ಉತ್ಸಾಹದ ಚಿಲುಮೆಯಾಗಿ ಅನೇಕ ಯುವಕ ಯುವತಿಯರಿಗೆ ಶಿಸ್ತು ಬದ್ಧ ಜೀವನೋದಯ ಮಾಡುತ್ತಿರುವ ನಿತ್ಯಯುವ ಪ್ರೇರಣಾಮದ ತಾವು ತಮ್ಮ ಮಾತೃವಾತ್ಸಲ್ಯದಿಂದ ಚಂಚಲ ಕನ್ಯಯರಿಗೆ ದೃಢತೆಯ ಶಕ್ತಿಯ ಭಾಗ್ಯದಯ ಮಾಡಿ ಶಿವಸತಿ ಗೊಳಿಸುತ್ತಿರುವ ವಿನಮ್ರತೆಯ ಮೂರ್ತಿಯಾಗಿ ಸರ್ವ ಅಣ್ಣಂದಿರ ಹೃದಯದಲ್ಲಿ ನಿರಹಂಕಾರತೆ, ಸರಳತೆಯ ಸತ್ಯ ಅರಿವು ಮೂಡಿಸುತ್ತಿರುವ ಸರ್ವ ಶಕ್ತಿಗಳ ಭಂಡಾರವಾಗಿ ಮಾತೆಯರಲ್ಲಿ ಸಂತುಷ್ಟತೆಯ ಅನುಭೋದಯ ಮಾಡಿಸಿ ಅಬಲೆಯನ್ನು ಕಲಾ ಪೂರ್ಣ ಗೊಳಿಸುತ್ತಿರುವ ತಾವು ಚಿಕ್ಕ ಮಕ್ಕಳಿಗೆ ಮಮತೆಯ ಮೂರ್ತಿಯಾಗಿ, ವೃದ್ಧರಿಗೆ ಧೈರ್ಯದ ಆಸರೆಯಾಗಿ ಸಮಾಜದ ಸಕಲ ರಂಗಗಳನ್ನು ಉದ್ದಾರ ಮಾಡುತ್ತಿರುವ ಆಥಕ್ ಸೇವಾಧಾರಿ ಆಗಿದ್ದಾರೆ.
ಚಿತ್ರದುರ್ಗದ ರೋಟರಿ ಕ್ಲಬ್‍ಗಳವತಿಯಿಂದ ಆಫ್ ಹೋಪ್’ ಎಂದು ಆಚರಿಸುತ್ತಿರುವ ಈ ವರ್ಷದಲ್ಲಿ ಆಶಾದೀಪವಾದ ತಮಗೆ ಶತಮಾನವು ಕಂಡ ಕನ್ನಡಾಂಬೆಯ ಹೆಮ್ಮೆಯ ಸಕಾರಾತ್ಮಕತೆಯ ಗಣಿ, ಭರವಸೆಯ ನಿಧಿ” ಎನ್ನುವ ಬಿರುವಿದಿನೊಂದಿಗೆ ಸನ್ಮಾನಿಸುವ ಅದೃಷ್ಟ ನಮ್ಮದು. ತಮಗೆ ಸಲ್ಲಿಸುತ್ತಿರುವ ಈ ಸನ್ಮಾನ ಪರಮಾತ್ಮನಿಗೆ `ಸಲ್ಲಿಸುತ್ತಿರುವ ಗೌರವ ಎಂದು ಅನುಭವವಾಗುತ್ತಿದೆ.
ಈ ಸಂದಭದಲ್ಲಿ ರೋಟರಿ ಕ್ಲಬ್‍ನ ಅದ್ಯಕ್ಷರಾದ ಕನಕರಾಜ್, ಕಾರ್ಯದರ್ಶಿ ವಿಕ್ರಾಂತ್ ಜೈನ್, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್‍ನ ಅಧ್ಯಕ್ಷರಾದ ಎಂ.ಗೀರೀಶ್, ಕಾರ್ಯದರ್ಶೀ ಶಶಿಧರ ಗುಪ್ತ,ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ಶಂಕರಪ್ಪ ಕಾರ್ಯದರ್ಶೀ ಲಕ್ಷ್ಮಕಾಂತ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಸ್ ವೀರೇಶ್, ಮಾಜಿ ಕಾರ್ಯದರ್ಶಿ ಜಯಶ್ರೀಷಾ, ಮುಖಂಡರಾದ ಶಿವಣ್ಣ, ಕುರುಬರಹಳ್ಳಿ, ಎಚ್.ಕೆ.ಎಸ್.ಸ್ವಾಮಿ, ಗಿರೀಶ್, ಮೋಹನ್ ಕುಮಾರ್, ರಾಘವೇಂದ್ರ, ಶಿವರಶ್ಮಿ ಅಕ್ಕ, ಕನ್ನಕಾ ಅಕ್ಕ, ದೇವಿಕಾ ಸೇರಿದಂತೆ ಇತರರು ಭಾಗವಹಿಸಿದ್ದರು.