ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆ.30 : ರಾಘವೇಂದ್ರತೀರ್ಥ ಗುರುಸಾರ್ವಭೌಮರ 352 ನೇ ಆರಾಧನಾ ಪಂಚರಾತ್ರೋತ್ಸವ ಆ.31 ರಿಂದ ಸೆ.2 ರವರೆಗೆ ಇಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ನಂಜನಗೂಡು ರಾಘವೇಂದ್ರಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
30 ರಂದು ಬೆಳಿಗ್ಗೆ 6-30 ರಿಂದ ಯಜುರ್ವೇದ ನಿತ್ಯ ನೂತನ ಉಪಾಕರ್ಮ, ಸಂಜೆ 6-30 ಪಂಚರಾತ್ರೋತ್ಸವ ಅಂಗವಾಗಿ ಧ್ವಜಾರೋಹಣ, ಗೋಪೂಜೆ, ಧನ, ಧಾನ್ಯ ಪೂಜೆ, ಲಕ್ಷ್ಮಿ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ.
ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಆನಂದರಾಮ ಉಳ್ಳೂರು, ವೇದವ್ಯಾಸಾಚಾರ್ ಇವರುಗಳು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಆಗಸ್ಟ್ 31 ರಂದು ಗುರುಸಾರ್ವಭೌಮರ ಪೂರ್ವಾರಾಧನೆ, ಸಂಜೆ ಐದರಿಂದ ಆರವರೆಗೆ ಪಾಂಡುರಂಗ ಭಜನಾ ಮಂಡಳಿಯಿಂದ ಭಜನೆ, 6-30 ರಿಂದ 7-30 ರವರೆಗೆ ಶ್ರೀಮತಿ ಸಿಂಧೂರ ದರ್ಶನ್ ಮತ್ತು ಕು.ಸೌಂದರ್ಯ ಸಂಗೀತ ಇವರಿಂದ ಭರತನಾಟ್ಯ.
ಸೆಪ್ಟೆಂಬರ್.1 ರಂದು ಸಂಜೆ 5-30 ರಿಂದ ಆರರತನಕ ಬ್ರಹ್ಮಚೈತನ್ಯ ಭಜನಾ ಮಂಡಳಿಯಿಂದ ಭಜನೆ.6-30 ರಿಂದ 7-30 ರವರೆಗೆ ಅಂಜನಾ ನೃತ್ಯ ಕಲಾ ಕೇಂದ್ರದ ಡಾ.ನಂದಿನಿ ಶಿವಪ್ರಕಾಶ್‍ರವರಿಂದ ಭರತನಾಟ್ಯ.
ಸೆಪ್ಟೆಂಬರ್ 2 ರಂದು ಸಂಜೆ 5 ರಿಂದ 6 ರವರೆಗೆ ಸಪ್ತಗಿರಿ ಭಜನಾ ಮಂಡಳಿಯಿಂದ ಭಜನೆ. 6-30 ರಿಂದ 7-30 ರವರೆಗೆ ಫಲ್ಗುಣಿ ಕಲಾ ತಂಡ ಹರಿಹರದ ಕು.ಸ್ತುತಿ ಆರ್.ರಾವ್ ಇವರಿಂದ ದಾಸವಾಣಿ, ನೃತ್ಯ ಕಾರ್ಯಕ್ರಮ.
ಗುರುಸಾರ್ವಭೌಮರ ಉತ್ತರಾರಾಧನೆ ಪ್ರಯುಕ್ತ ಚಿತ್ರದುರ್ಗ ನಗರದ ರಾಜಬೀದಿಗಳಲ್ಲಿ ವಿವಿಧ ಭಜನಾ ಮಂಡಳಿಗಳ ಹಾಗೂ ಭಕ್ತರೊಂದಿಗೆ ಮಹಾರಥೋತ್ಸವ ಸಾಗಲಿದೆ.
ಸೆಪ್ಟೆಂಬರ್ 3 ರಂದು ಸಂಜೆ 5 ರಿಂದ 6 ರವರೆಗೆ ಸರಸ್ವತಿ ಭಜನಾ ಮಂಡಳಿಯಿಂದ ಭಜನೆ. 6-30 ರಿಂದ 7-30 ರವರೆಗೆ ಸಂಧ್ಯಾ ಜೈಶಂಕರ್ ತಾಳ್ಯ ಇವರಿಂದ ದಾಸವಾಣಿ ಕಾರ್ಯಕ್ರಮ.
ಆರಾಧನಾ ಮಹೋತ್ಸವದ ದಿನಗಳಲ್ಲಿ ನಿರ್ಮಾಲ್ಯ, ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ, ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ, ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾಮಂಗಳಾರತಿ ತೀರ್ಥಪ್ರಸಾದ, ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ವಾವಧಾನ, ಮಹಾಮಂಗಳಾರತಿ,
ಮೂರು ದಿನಗಳ ಕಾಲ ಮಹಾ ಅನ್ನಸಂತರ್ಪಣೆಯಿರುತ್ತದೆ. ಭಕ್ತಾಧಿಗಳು ತನು, ಮನ, ಧನದೊಂದಿಗೆ ಆಗಮಿಸಿ ರಾಘವೇಂದ್ರಸ್ವಾಮಿಗಳವರ ಕೃಪೆಗೆ ಪಾತ್ರರಾಗುವಂತೆ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ : 9741400492 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.