ಚಿತ್ರದುರ್ಗ, (ಆ. 21) : ನಮ್ಮಗಳ ನೆಮ್ಮದಿಗೆ ಪೋಲಿಸರು ಕಾರಣರಾಗಿದ್ದಾರೆ, ಅವರ ಸ್ಮರಣೆಯನ್ನು ಸದಾ ಮಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಮನಗೂಳಿ ಪ್ರೇಮಾವತಿ ತಿಳಿಸಿದರು.
ನಗರದ ಜಿಲ್ಲಾ ಪೋಲಿಸ್ ಇಲಾಖೆವತಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಲಿಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವವಹಿಸಿ ಮಾತನಾಡಿದರು.
ಇದೊಂದು ಭಾವನಾತ್ಮಾಕವಾದ ಕಾರ್ಯಕ್ರಮವಾಗಿದೆ. ನಾವುಗಳು ನೆಮ್ಮದಿಯಾಗಿ ಇರಲು ಪೋಲೀಸರು ಕಾರಣರಾಗಿದ್ದಾರೆ ಎಂಬುದನ್ನು ಮರೆಯಬಾರದು, ಅವರು ತ್ಯಾಗ ಮತ್ತು ಬಲಿದಾನವನ್ನು ಸ್ಮರಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಇವರ ಸೇವೆಯನ್ನು ಎಷ್ಟು ಸ್ಮರಣೆ ಮಾಡಿದರು ಸಾಲದು, ಬಿಸಿಲು, ಮಳೆ, ಛಳಿ ಎನ್ನದೆ ನಮ್ಮನ್ನು ದೇಶದ ಒಳಗಡೆ ಪೋಲಿಸರು ಕಾಯುತ್ತಿದ್ದರೆ, ದೇಶದ ಗಡಿ ಪ್ರದೇಶದಲ್ಲಿ ಯೋಧರು ಸಹಾ ದೇಶವನ್ನು ಕಾಯುವುದರ ಮೂಲಕ ಹೂರಗಿನ ಶತೃಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪೋಲಿಸರು ಮತ್ತು ಯೋಧರ ಕರ್ತವ್ಯವನ್ನು ಸ್ಮರಣೆ ನ್ಯಾಯಾಧೀಶರು ಸ್ಮರಣೆ ಮಾಡಿದರು.
ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ಜಿ.ರಾಧಿಕಾರವರು ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಕರ್ತವ್ಯ ಸಮಯದಲ್ಲಿ ಸಾವನ್ನಪ್ಪಿದ ದೇಶದ 377 ಹಾಗೂ ಕರ್ನಾಟಕದ 16 ಜನ ಪೋಲಿಸ್ ಸಿಬ್ಬಂದಿ ಮತ್ತು ಯೋಧರ ಹೆಸರನ್ನು ವಾಚಿಸಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಎಡ ತೋಳಿಗೆ ಕಪ್ಪು ಪಟ್ಟಿಯನ್ನು ಕಟ್ಟುವುದರ ಮೂಲಕ ಮೃತರಿಗೆ ಗೌರವವನ್ನು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಪೋಲಿಸ್ ಸಿಬ್ಬಂದಿ, ನಿವೃತ್ತ ಸಿಬ್ಬಂಧಿ, ನಾಗರೀಕರು, ಭಾಗವಹಿಸಿ ಮೃತರ ಯೋಧರಿಗೆ ಗೌರವವನ್ನು ಸಲ್ಲಿಸಿದರು. ಪೋಲಿಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪಾಪಣ್ಣ, ಹೆಚ್ಚುವರಿ ರಕ್ಷಣಾಧಿಕಾರಿ ಮಹಾಲಿಂಗ ನಂದಗಾವಿ ಭಾಗವಹಿಸಿದ್ದರು. ಶಿವರಾಂ ಕಾರ್ಯಕ್ರಮ ನಿರೂಪಿಸಿದರು.