Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಂಧಗಿಯನ್ನು ನಿರ್ಲಕ್ಷಿಸಿದ ರಾಷ್ಟ್ರೀಯ ಪಕ್ಷಗಳು: ಹೆಚ್ಡಿಕೆ

Facebook
Twitter
Telegram
WhatsApp

ವಿಜಯಪುರ: ಕಳೆದ ಐವತ್ತು ವರ್ಷಗಳಿಂದ ಸಿಂಧಗಿ ಕ್ಷೇತ್ರವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಸಮಾನವಾಗಿ ಕಡೆಗಣಿಸಿವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಎಲ್ಲ ರಾಜಕೀಯ ಪಕ್ಷಗಳೂ ತಲೆತಗ್ಗಿಸುವಂತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ ಕೊಟ್ಟ ನೀರಾವರಿ ಯೋಜನೆಗಳು ಹಾಗೂ ನಾನು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡ ಕಾರ್ಯಕ್ರಮಗಳು ಬಿಟ್ಟರೆ ಬೇರಾವ ಪ್ರಗತಿಯೂ ಇಲ್ಲಿ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.

14 ತಿಂಗಳು ನಾನು ಮುಖ್ಯಮಂತ್ರಿ ಆಗಿದ್ದಾಗ 1200 ಕೋಟಿ ರೂ. ಅನುದಾನವನ್ನು ಸಿಂಧಗಿ ಕ್ಷೇತ್ರಕ್ಕೆ ನೀಡಿದ್ದೇನೆ. ದೇವೇಗೌಡರು ಇಲ್ಲದಿದ್ದರೆ ನಾವಿಲ್ಲಿ ಭತ್ತ, ಕಬ್ಬು ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಇಲ್ಲಿನ ಜನ ಈಗಲೂ ಮಾತನಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

‌ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತರ ವಿಷಯದ ಬಗ್ಗೆ ನಾನು ಕೇಳಿದ ಐದು ಪ್ರಶ್ನೆಗಳಿಗೆ ಇನ್ನೂ ಸಿದ್ದರಾಮಯ್ಯ ಅವರಾಗಲಿ ಅಥವಾ ಕಾಂಗ್ರೆಸ್‌ ಆಗಲಿ ಉತ್ತರ ನೀಡಿಲ್ಲ. ಅದರ ಹೊರತಾಗಿ ಅನಗತ್ಯ ವಿಷಯಗಳ ಬಗ್ಗೆ ಆ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆಂದು ಕುಮಾರಸ್ವಾಮಿ ಅವರು ಹೇಳಿದರು.

ಯಾರ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುವ ಆಸಕ್ತಿ ನನಗಿಲ್ಲ. ನನ್ನ ಬಗ್ಗೆ ಕಾಮೆಂಟ್‌ ಮಾಡೋರನ್ನು ನಾನು ಕೇರ್‌ ಮಾಡಲ್ಲ. ಜನರಿಗೆ ಮಾಡುವ ಕೆಲಸ ಬೇಕಾದಷ್ಟಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಜನರು ಅನೇಕ ಸಮಸ್ಯೆಗಳಿಂದ ಒದ್ದಾಡುತ್ತಿದ್ದಾರೆ. ಅವರಿಗೆ ಪರಿಹಾರ ಕೊಡುವುದು ಎಲ್ಲರ ಆದ್ಯತೆ ಆಗಬೇಕು ಎಂದರಲ್ಲದೆ; ನಾನು ಆರ್‌ ಎಸ್‌ ಎಸ್‌ ಸೇರಿಂದತೆ ಯಾವುದೇ ಸಂಘ ಸಂಸ್ಥೆ ಬಗ್ಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾತನಾಡಿಲ್ಲ. ನನ್ನ ಅನುಭವಕ್ಕೆ ಬಂದ, ನನಗೆ ತಿಳಿದ ವಿಷಯಗಳನ್ನಷ್ಟೇ ಹೇಳಿದ್ದೇನೆ ಎಂದು ಅವರು ತಿಳಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಮಹತ್ವದ ಸೂಚನೆ : ಈ ಕೆಲಸಕ್ಕೆ ಹಣ ಕೇಳಿದರೆ ದೂರು ನೀಡಿ

  ಚಿತ್ರದುರ್ಗ. ನ.25: ವಿಫಲವಾದ  ಪರಿವರ್ತಕದ ಬದಲಾವಣೆಗೆ ಮಧ್ಯವರ್ತಿ, ಏಜೆನ್ಸಿ, ಅಧಿಕಾರಿ ಹಾಗೂ ನೌಕರರಿಗೆ ಹಣ ನೀಡಬಾರದು ಎಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಸೂಚನೆ ನೀಡಿದೆ. ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ

ಮನೆ ಮನೆಗೆ ಗ್ಯಾಸ್ ಪೈಪ್‍ಲೈನ್ ಕಾಮಗಾರಿಗೆ ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ಚಾಲನೆ

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ಮನೆ ಮನೆಗೂ ಅಡುಗೆ ಅನಿಲ ಪೂರೈಸುವ ಕಾಮಗಾರಿಗೆ ನಗರಸಭೆ ಸದಸ್ಯ ಹೆಚ್.ಶ್ರೀನಿವಾಸ್ ಸ್ಟೇಡಿಯಂ ಸಮೀಪ ಸೋಮವಾರ ಚಾಲನೆ ನೀಡಿದರು. ಗ್ಯಾಸ್ ಪೈಪ್‍ಲೈನ್ ಕಾಮಗಾರಿಗೆ ಭೂಮಿ ಪೂಜೆ

ಡಿಸೆಂಬರ್ 09 ರಂದು ಹಿರಿಯೂರು ಬಂದ್

ಹಿರಿಯೂರು, ನವೆಂಬರ್. 25 : ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಡ್ಯಾಂ ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತ ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸೋಮವಾರ 160ನೇ ದಿನಕ್ಕೆ ಕಾಲಿಟ್ಟಿತು.

error: Content is protected !!