ನವದೆಹಲಿ: ಮೋದಿ ಸರ್ ನೇಮ್ ಬಳಕೆ ಮಾಡಿದ್ದ ವಿಚಾರಕ್ಕೆ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಅದರಿಂದ ರಾಹುಲ್ ಗಾಂಧಿ ಅವರಿಗೆ ಜೈಲು ಶಿಕ್ಷೆ ಹಾಗೂ ಸಂಸದ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಇದೀಗ ಅನರ್ಹತೆಯನ್ನು ವಾಪಾಸ್ ಪಡೆದು, ಈಗ ಸಂಸದ ಸ್ಥಾನಕ್ಕೂ ಮರುನೇಮಕ ಮಾಡಲಾಗಿದೆ.
ಲೋಕಸಭೆಯ ಸೆಕ್ರೆಟರಿಯೇಟ್ ನಿಂದ ಹೊಸ ಆದೇಶವೊಂದು ಸಿಕ್ಕಿದೆ. ರಾಹುಲ್ ಗಾಂಧಿ ಅವರ ಮೇಲಿದ್ದ ಅನರ್ಹತೆ ಆದೇಶವನ್ನು ಹಿಂಪಡೆಯಲಾಗಿದೆ. ಸುಪ್ರೀಂ ಕೋರ್ಟ್ ನ ಮಧ್ಯಂತರ ಆದೇಶದಿಂದಾಗಿ ರಾಹುಲ್ ಗಾಂಧಿಗೆ ರಿಲೀಫ್ ಸಿಕ್ಕಿದೆ.
ಇದೀಗ 2005ರಿಂದ ವಾಸವಾಗಿದ್ದ ಸರ್ಕಾರಿ ಬಂಗಲೆಯೂ ರಾಹುಲ್ ಗಾಂಧಿಗೆ ವಾಪಸ್ ಸಿಗಲಿದೆ. ತುಘಲಕ್ ಲೇನ್ ನಲ್ಲಿ ರಾಹುಲ್ ಗಾಂಧಿಯ ಸರ್ಕಾರಿ ಬಂಗಲೆ ಇತ್ತು. ಇತ್ತಿಚೆಗೆ ಅನರ್ಹತೆಗೊಂಡಾಗ ಆ ಬಂಗಲೆಯನ್ನು ತಾವೇ ಲಾಲ್ ಮಾಡಿ, ಸಿಬ್ಬಂದಿಗಳಿಗೆ ಕೀ ತಲುಪಿಸಿ, ಧನ್ಯವಾದ ತಿಳಿಸಿ ಬಂದಿದ್ದರು. ಇದೀಗ ಮತ್ತೆ ಆ ಬಂಗಲೆಗೆ ಹೋಗಲಿದ್ದಾರೆ. ರಾಹುಲ್ ಗಾಂಧಿ ಅನರ್ಹತೆಯ ರದ್ದಾದ ಬಳಿಕ ಕಾಂಗ್ರೆಸ್ ನಾಯಕರು ಸಂಭ್ರಮಿಸಿದ್ದಾರೆ.