ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಜೋರು ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಸಮಸ್ಯೆ ಆಗಿದೆ. ಸಾವುಗಳು ಕೂಡ ಸಂಭವಿಸಿದೆ. ಇದೀಗ ಆ ಜೋರು ಮಳೆಗೆ ಸದ್ಯ ಬಿಡುವು ಸಿಗುವ ಸಾಧ್ಯತೆ ಇದೆ. ಹವಮಾನ ಇಲಾಖೆಯಿಂದ ಮಳೆಯ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
ಆಗಸ್ಟ್ 3ರಿಂದ ಸುಮಾರು ಒಂದು ವಾರಗಳ ಕಾಲ ಮಳೆಯ ಅಬ್ಬರ ತಗ್ಗಲಿದೆ. ಕಳೆದ 10 ದಿನದಿಂದ ಸುರಿಯುತ್ತಿರುವ ಮಳೆಯಿಂದ ಕೊಂಚ ಬಿಡುವು ಸಿಗಲಿದೆ. ಮತ್ತೆ ಆಗಸ್ಟ್ 11ರಿಂದ 17ರವರೆಗೆ ವಾಡಿಕೆಯ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.
ಮಳೆ ಕೊಂಚ ತಗ್ಗಿದರೂ ಕೆಪವೊಂದು ಕಡೆ ಮಳೆಯಿಂದಾಗುವ ಅನಾಹುತಗಳು ಮಾತ್ರ ತಪ್ಪುತ್ತಿಲ್ಲ. ಸದ್ಯ ಮಳೆ ಕಡಿಮೆಯಾಗುತ್ತಿರುವ ಕಾರಣ ರೈತರ ಮುಖದಲ್ಲಿ ಮಂದಹಾಸ ಅರಳಿದೆ. ಈಗಾಗಲೇ ಜಮಿನಿನ ಉಳುಮೆ ಮಾಡಲಾಗಿದೆ. ಬೀಜ ಬಿತ್ತನೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.