ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಬಂಧನದಲ್ಲಿದ್ದಾರೆ. ಗಲಾಟೆಯಲ್ಲಿ ಬಂಧಿತರಾಗಿರುವವರನ್ನು ನಿಯಮಾನುಸಾರ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವೊಂದು ಪ್ರಕರಣದಲ್ಲಿ ಹಾಕಿರುವ ಕೇಸ್ ಗಳಲ್ಲಿ ಸತ್ಯಾಂಶ ಇಲ್ಲದೆ ಹೋದರೆ ಅವುಗಳನ್ನು ವಾಪಾಸ್ ಪಡೆಯಿರಿ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. ಅವರ ಮನವಿ ಪತ್ರವನ್ನು ತಕ್ಷಣ ತೆಗೆದುಕೊಳ್ಳುವುದಿಲ್ಲ. ಇದನ್ನು ಸಚಿವ ಸಂಪುಟ ಉಪಸಮಿತಿಯ ಮುಂದೆ ಇಡಲಾಗುತ್ತದೆ.
ನಾವೀಗ ಪ್ರಕ್ರಿಯೆ ಶುರು ಮಾಡಿದ್ದೇವೆ ಅಷ್ಟೇ. ನಂತರ ಈ ವಿಚಾರ ಕ್ಯಾಬಿನೆಟ್ ಮುಂದೆ ಬರುತ್ತದೆ. ಕ್ಯಾಬಿನೆಟ್ ನಲ್ಲಿ ಅದು ಅಪ್ರೂವಲ್ ಆಗುತ್ತದೆ ಅಂತ ಅಲ್ಲ. ಕಾನೂನಾತ್ಮಕವಾಗಿ ಅದನ್ನು ನೋಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯವರು ಅದ್ಯಾಕೆ ರಾಜಕಾರಣ ಮಾಡ್ತಿದ್ದಾರೆ. ಸಣ್ಣ ಸಣ್ಣ ವಿಷಯಗಳಲ್ಲು ರಾಜಕಾರಣ ಮಾಡ್ತಿದ್ದಾರೆ. ಬರಗಾಲ, ಪ್ರವಾಹದ ಬಗ್ಗೆ ಅವರು ಮಾತನಾಡಲ್ಲ. ಅವರಿಗೆ ಬೇರೆ ಕೆಲಸವೇ ಇಲ್ಲ ಎಂಬಂತೆ ಕಾಣುತ್ತದೆ ಎಂದಿದ್ದಾರೆ.