ಬಾಗಲಕೋಟೆ: ಬಿಜೆಪಿಯಲ್ಲಿ ಇನ್ನು ಕೂಡ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಸದನ ಶುರುವಾಗುವುದರೊಳಗೆ ನಾಯಕ ಆಯ್ಕೆ ಮಾಡುತ್ತೇವೆ ಎಂದಿದ್ದರು. ಆದರೆ ಇನ್ನು ಆಗಿಲ್ಲ. ಹೀಗಾಗಿ ಅಬಕಾರಿ ತಿಮ್ಮಾಪುರ ವ್ಯಂಗ್ಯವಾಡಿದ್ದಾರೆ.
ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್ ಹತ್ತಿರಕ್ಕೂ ಸೇರಿಸುತ್ತಿಲ್ಲ. ಮೋದಿ, ಅಮಿತ್ ಶಾ ತನ್ನ ಕಚೇರಿಯ ಒಳಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ಹೀಗಾಗಿಯೇ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಕಚೇರಿಗೂ ಬಿಟ್ಟುಕೊಳ್ಳದೆ ಇರುವುದಕ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಗಾಬರಿಯಾಗಿದೆ. ನಮ್ಮನ್ನು ಕರೆದು ವಿಪಕ್ಷ ನಾಯಕನನ್ನಾಗಿ ಮಾಡುತ್ತಾರೆ ಎಂದುಕೊಂಡು ಈಗ ಹಾದಿ ಬೀದಿಯಲ್ಲೆಲ್ಲಾ ಕೂಗಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು ಇದೇ ವೇಳೆ ಮಣಿಪುರದ ಘಟನೆ ಖಂಡಿಸಿದ್ದು, ಇಂತಹ ಪ್ರಧಾನಿ ಇದ್ದರೆ ಬಡವರು, ಹಿಂದುಳಿದವರು ಬದುಕುವುದು ಹೇಗೆ..? ಅವಮಾನಕ್ಕೀಡಾದ ಸಂತ್ರಸ್ತೆಗೆ ಸಾಂತ್ವನದ ಮಾತುಗಳನ್ನು ಸಹ ಹೇಳಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಇಂಥ ಘಟನೆ ವಿರುದ್ಧ ಪ್ರಧಾನಿ ಮೋದಿ ಮಾತನಾಡಿಲ್ಲ. ನಾನು ಕಂಡ ಅತ್ಯಂತ ಕೆಟ್ಟ ಪ್ರಧಾನಿ ಇವರು ಎಂದಿದ್ದಾರೆ.