ಬೆಂಗಳೂರು : ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ನೀಡಬೇಕಾದ ಶೇಕಡಾ4 ರಷ್ಟು ಬಡ್ತಿ ವಿಷಯದಲ್ಲಿ ಕೇವಲ ಸಿ ಮತ್ತು ಡಿ ವೃಂಧಗಳಿಗೆ ಮಾತ್ರ ನೀಡಿ ಉಳಿದ ಎ ಮತ್ತು ಬಿ ವೃಂಧಗಳಿಗೆ ನೀಡದೇ ತಾರತಮ್ಯ ಮಾಡಿತ್ತು.ಇದನ್ನು ಪ್ರಶ್ನಿಸಿ ಎ ಮತ್ತು ಬಿ ವೃಂದದ ಹುದ್ದೆಗಳಿಗೂ ಕೂಡಾ ಶೇಕಡಾ 4 ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ವಿಕಲಚೇತನ ನೌಕರರ ಸಂಘವು ಕೋರ್ಟನಲ್ಲಿ ಮತ್ತೆ ದಾವೆ ಹೂಡಿದೆ.
ಈ ಹಿಂದೆ ಸುಪ್ರೀಂಕೋರ್ಟ್ ಆದೇಶದಂತೆ ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಬಡ್ತಿಯಲ್ಲಿ ಮೀಸಲಾತಿಯನ್ನು ನೀಡುವಂತೆ ಈ ಹಿಂದಿನ ಸರಕಾರದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಅನೇಕ ಸಚಿವರಿಗೂ ಮನವಿ ಪತ್ರ ನೀಡಿದರೂ ಕೂಡಾ ಯಾವುದೇ ಪ್ರಯೋಜನ ಆಗಿರಲಿಲ್ಲ.
ಇದನ್ನು ಅರಿತ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಬಡ್ತಿ ಮೀಸಲಾತಿ ಜಾರಿಗೆ ಮಾಡದ ಸರಕಾರದ ನಡೆಯನ್ನು ಪ್ರಶ್ನೆ ಮಾಡಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ನ್ಯಾಯಾಲಯದಿಂದ ಸರಕಾರಕ್ಕೆ ನೋಟಿಸ್ ಹೋದ ಕೂಡಲೇ ಸರಕಾರ ತನ್ನ ಕೊನೆಯ ಸಚಿವ ಸಂಪುಟದಲ್ಲಿ ಕೇವಲ ಸಿ ಮತ್ತು ಡಿ ಹುದ್ದೆಗಳಿಗೆ ಮಾತ್ರ ಆದೇಶ ಜಾರಿಗೆ ಮಾಡುವ ಮೂಲಕ ವಿಕಲಚೇತನ ನೌಕರರಲ್ಲಿ ತಾರತಮ್ಯ ಉಂಟು ಮಾಡಿದೆ.
ವಿಕಲಚೇತನ ನೌಕರರ ತಾರತಮ್ಯ ಮಾಡಿರುವ ಸರಕಾರದ ನಡೆಯಿಂದ ಎ ಮತ್ತು ಬಿ ಹುದ್ದೆಗಳ ನೌಕರರಿಗೆ ಅನ್ಯಾಯ ಆಗುವುದನ್ನು ಗಮನಿಸಿ ಮತ್ತೇ ಸಂಘದಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ದಾವೆಯ ಕುರಿತು ಕಿರಿಯ ವಕೀಲರಾದ ಶ್ರೀಮತಿ ಶ್ರೀ ಅವರ ಜೊತೆಯಲ್ಲಿ ಚರ್ಚೆ ನಡೆಸಲಾಯಿತು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ, ಬೆಂಗಳೂರು ವಿಭಾಗದ ಕಾರ್ಯದರ್ಶಿ ಚೇತನ ಹಾಜರಿದ್ದರು.