ಬೆಂಗಳೂರು: ಕಾಂಗ್ರೆಸ್ ನಾಯಕರು ವಿಪಕ್ಷ ನಾಯಕರಿಗೆ ಆಹ್ವಾನ ಮಾಡಿದ್ದಾರೆ. 123 ಸ್ಥಾನ ಬರೆದಿದ್ದರೆ ಜೆಡಿಎಸ್ ವಿಸರ್ಜನೆ ಎಂದು ಅಪಪ್ರಚಾರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ನಡ ಬರಲ್ಲ ಅಂತ ಕಾಣಿಸುತ್ತೆ. ಯಾಕಂದ್ರೆ ನಾನು ನಮ್ಮ ಸರ್ಕಾರ ಬಂದರೆ ಪಂಚರತ್ನ ಯೋಜನೆಯನ್ನು ಜಾರಿ ಮಾಡುತ್ತೇವೆ. ಇಲ್ಲಂದ್ರೆ ವರ್ಷವಾದ ಮೇಲೆ ರಾಜಕೀಯ ವಿಸರ್ಜನೆ ಮಾಡುತ್ತೇನೆ ಎಂದಿದ್ದೆ. ಆದ್ರೆ ಸಿದ್ದರಾಮಯ್ಯ ಅವರಿಗೆ ಕನ್ನಡ ಬರಲ್ಲ ಎನಿಸುತ್ತೆ ಎಂದು ತಿರುಗೇಟು ನೀಡಿದ್ದಾರೆ.
ಯಾರೋ ಪಾಯಲ್ ಅದು ಹೇಗೆ ನೇಮಕ ಮಾಡಿದ್ರೋ ಏನೋ..? ಸಿಎಂ ಸಿದ್ದರಾಮಯ್ಯ ಸಂಬಂಧಿಕರಂತೆ. ನನಗೆ ಗೊತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳ್ತಾರೆ. ಸರ್ವರಿಗೂ ಸಮಪಾಲು ಸಮ ಬಾಳು ಇವರ ಸಿದ್ಧಾಂತ. ಸಿಎಂ ಸಿದ್ದರಾಮಯ್ಯ ಸಂಬಂಧಿಕರಂತೆ ನನಗೆ ಗೊತ್ತಿಲ್ಲ.
ಒಬ್ಬ ಅಧಿಕಾರಿ ನನಗೆ ಮಾಹಿತಿ ನೀಡಿದ್ದಾರೆ. ಈ ಮಟ್ಟಕ್ಕೆ ಆದರೆ ರಾಜ್ಯ ಉಳಿಯುತ್ತಾ. ವರ್ಗಾವಣೆಯಲ್ಲಿ 500 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ಕೈ ಸರ್ಕಾರದ ವಿರುದ್ಧ ಎಚ್ಡಿಕೆ ಸ್ಪೋಟಕ ಆರೋಪ ಮಾಡಿದ್ದು, ಕೇವಲ ಎರಡು ತಿಂಗಳಲ್ಲಿ 5 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದಿದ್ದಾರೆ.