ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 9886295817
ಚಿತ್ರದುರ್ಗ (ಜು.01) : ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತೆಗೆಯಲು ಈ ರೀತಿಯಾದ ಕಾರ್ಯಕ್ರಮಗಳ ಸಹಕಾರಿಯಾಗಿವೆ ಎಂದು ಶ್ರೀ ಪಾರ್ಶ್ವನಾಥ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಸಿಸೋಡಿಯಾ ತಿಳಿಸಿದರು.
ನಗರದ ಶ್ರೀ ಪಾರ್ಶ್ವನಾಥ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 2023 – 24 ನೇ ಸಾಲಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮಣ್ಣಿನ ಮುದ್ದೆ ಇದ್ದಂತೆ ಅವರನ್ನು ನಾವುಗಳು ಯಾವ ರೀತಿ ಬೆಳಸುತ್ತೇವೂ ಅದೇ ರೀತಿ ಬೆಳೆಯುತ್ತಾರೆ. ಈ ದಿಸೆಯಲ್ಲಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಮಾರ್ಗದರ್ಶನವನ್ನು ನೀಡಬೇಕಿದೆ ಎಂದು ಕರೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಉತ್ತಮ್ ಚಂದ್ ಸುರಾನ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಮಕ್ಕಳಿಗೆ ಉತ್ತೇಜನ ನೀಡುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ವರ್ಷ ಪೂರ್ತಿಯಾಗಿ ನಡೆಸಲಾಗುತ್ತದೆ. ಇದರಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕಿದೆ ಇದರ ಹೂಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ಈ ಕಾರ‍್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಉತ್ತಮ್ ಚಂದ್ ಸುರಾನ ಹಾಗೂ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಮುತ್ತ, ಜವೇರಿಲಾಲ್ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಜಿಮಾ ಸ್ವಾಲೇಹಾ ಹಾಗೂ ಶ್ರೀಮತಿ ವಿಜಯಲಕ್ಷ್ಮೀ ದೀಪ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ನೃತ್ಯ ಮಾಡುವುದರ ಮೂಲಕ ಎಲ್ಲರನ್ನು ರಂಜಿಸಿದರು. ಈ ಕಾರ‍್ಯಕ್ರಮದಲ್ಲಿ ಬೋಧಕವರ್ಗ ಹಾಗೂ ಬೋಧಕೇತರ ವರ್ಗದವರು ಭಾಗವಹಿಸಿದರು.