ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಭರವಸೆಗಳಲ್ಲಿ ಅಕ್ಕಿ ಭಾಗ್ಯ ಕೂಡ ಒಂದು. ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ಹತ್ತು ಕೆಜಿ ಅಕ್ಕಿ ನೀಡಿತ್ತೇವೆ ಎಂದು ಹೇಳಿತ್ತು. ಅಕ್ಕಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಡಿತ್ತು ರಾಜ್ಯ ಸರ್ಕಾರ. ಆದರೆ ಈಗ ಅಕ್ಕಿ ಸಿಗದೆ ಇರುವ ಕಾರಣಕ್ಕೆ ಹಣ ನೀಡಲು ಮುಂದಾಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ವಿಧಾನಸೌಧದ ಬಳಿ ಮಾತನಾಡಿದ್ದು, ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವ ಕೆಲಸ ಮಾಡುತ್ತಿಲ್ಲ. ನಾವು ದುಡ್ಡು ಕೊಡುತ್ತೀವಿ ಅಂದ್ರು ಕೇಂದ್ರ ಅಕ್ಕಿ ಕೊಡ್ತಿಲ್ಲ. ಹೀಗಾಗಿ ನಾವು ಬಡವರಿಗೆ ಹಣ ಕೊಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಅಕ್ಕಿ ಬದಲು ಹಣ ಕೊಡಲು ನಿರ್ಧಾರ ಮಾಡಿದ್ದು, ಅಕ್ಕಿ ಕೊರತೆ ಹಿನ್ನೆಲೆ ಹಣ ನೀಡಲು ನಿರ್ಧರಿಸಿದ್ದೇವೆ. ನಾನೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಬೇಟಿಯಾಗಿದ್ದೆ. ಆಹಾರ ಸಚಿವ ಪಿಯೂಷ್ ಗೋಯಲ್ ಹೇಳ್ತೀನಿ ಅಂತ ಹೇಳಿದ್ರು. ರಾಜ್ಯಕ್ಕೆ ಅಕ್ಕಿ ಪೂರಿಸಲು ಆಗಲ್ಲ ಅಂತ ಗೋಯಲ್ ಹೇಳಿದ್ರು. ಜುಲೈ 1 ರಿಂದ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೆವು. ಜನರಿಗೆ ನಾವು ನೀಡಿದ ಭರವಸೆಯಂತೆ ಹಣ ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.