Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇಶದಲ್ಲಿ 10 ಕೋಟಿಗೂ ಹೆಚ್ಚು ಮಧುಮೇಹಿಗಳು :  ನಾಲ್ಕು ವರ್ಷಗಳಲ್ಲಿ ಶೇ.44ರಷ್ಟು ಹೆಚ್ಚಳ : ICMR ಅಧ್ಯಯನದಲ್ಲಿ ಬಹಿರಂಗ

Facebook
Twitter
Telegram
WhatsApp

ಸುದ್ದಿಒನ್

ಇತ್ತೀಚಿನ ದಿನಗಳಲ್ಲಿ ಜನರ
ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬಾರಿ ಬದಲಾವಣೆಯಾಗಿದೆ. ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡದಿರುವುದರಿಂದ ಸಾಕಷ್ಟು ಜನರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ದೇಶದ ಜನಸಂಖ್ಯೆಯ ಕನಿಷ್ಠ 15.3 ಪ್ರತಿಶತ ಅಥವಾ 136 ಮಿಲಿಯನ್ ಜನರು -ಮಧುಮೇಹ ರೋಗವನ್ನು ಹೊಂದಿದ್ದಾರೆ.

2019 ರಲ್ಲಿ ಈ ಸಂಖ್ಯೆ 70 ಮಿಲಿಯನ್ ಆಗಿದ್ದರೆ, ನಾಲ್ಕು ವರ್ಷಗಳಲ್ಲಿ ಇದು 100 ಮಿಲಿಯನ್ ದಾಟಿದೆ. ಅಂದರೆ ನಾಲ್ಕು ವರ್ಷಗಳಲ್ಲಿ ಶೇ.44ರಷ್ಟು ಹೆಚ್ಚಳವಾಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಮದುಮೇಹ ಪೀಡಿತರಾಗುತ್ತಾರೆ ಎಂದು ಐಸಿಎಂಆರ್ ಅಧ್ಯಯನದಲ್ಲಿ  ತಿಳಿಸಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧುಮೇಹಿಗಳ ಸಂಖ್ಯೆ ಆತಂಕ ಸೃಷ್ಟಿಸಿದೆ.
ICMR ನ ಇತ್ತೀಚಿನ ಅಧ್ಯಯನವು ದೇಶದಲ್ಲಿ 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ.
2019 ರಲ್ಲಿ ಈ ಸಂಖ್ಯೆ 70 ಮಿಲಿಯನ್ ಆಗಿದ್ದರೆ, ನಾಲ್ಕು ವರ್ಷಗಳಲ್ಲಿ 100 ಮಿಲಿಯನ್ ದಾಟಿರುವುದು ಆತಂಕಕಾರಿಯಾಗಿದೆ.

ಅಧ್ಯಯನದ ಫಲಿತಾಂಶಗಳನ್ನು ಲ್ಯಾನ್ಸೆಟ್(lancet) ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಸಂಖ್ಯೆ ಸ್ಥಿರವಾಗಿದೆ. ಆದರೆ ಇತರೆ ಅನೇಕ ದೇಶಗಳಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದಾರೆ ಎಂಬ ಅಂಶವು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಮದುಮೇಹ ರೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ನೀಡಬೇಕೆಂದು ವರದಿಯಲ್ಲಿ ತಿಳಿಸಿದೆ.

ಇಷ್ಟೇ ಅಲ್ಲದೆ, ಜನಸಂಖ್ಯೆಯ ಕನಿಷ್ಠ 15.3 ಪ್ರತಿಶತ ಅಥವಾ 136 ಮಿಲಿಯನ್ ಜನರು ಮಧುಮೇಹವನ್ನು ಹೊಂದಿದ್ದಾರೆ. ಗೋವಾ (26.4%), ಪುದುಚೇರಿ (26.3%), ಕೇರಳದಲ್ಲಿ (25.5%) ಮಧುಮೇಹವು ರಾಷ್ಟ್ರೀಯ ಸರಾಸರಿ (11.4%) ಗಿಂತ ದ್ವಿಗುಣವಾಗಿದೆ.
ಮುಂದಿನ ಕೆಲವು ವರ್ಷಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಅರುಣಾಚಲ ಪ್ರದೇಶದಂತಹ ಕಡಿಮೆ ಮದುಮೇಹ ಹೊಂದಿರುವ ರಾಜ್ಯಗಳಲ್ಲಿಯೂ ಸಹಾ ಮಧುಮೇಹ ಪ್ರಕರಣಗಳು ವಿಪರೀತವಾಗಿ ಹೆಚ್ಚಾಗಲಿವೆ ಎಂದು ಅಧ್ಯಯನವು ಎಚ್ಚರಿಸಿದೆ.

ಗೋವಾ, ಕೇರಳ, ತಮಿಳುನಾಡು ಮತ್ತು ಚಂಡೀಗಢದಲ್ಲಿ ಮಧುಮೇಹ ಪ್ರಕರಣಗಳು ಕಡಿಮೆ. ಪುದುಚೇರಿ ಮತ್ತು ದೆಹಲಿಯಲ್ಲಿ ಬಹುತೇಕ ಅಷ್ಟೇ ಆಗಿದೆ ಎಂದು ಅಧ್ಯಯನದ ಮೊದಲ ಲೇಖಕರಾದ ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಡಾ.ರಂಜಿತ್ ಮೋಹನ್ ಅಂಜನಾ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಮಧುಮೇಹ ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ಅದರೂ ಕೂಡ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಮಧುಮೇಹ ಇದ್ದು ಉಳಿದವರಿಗೂ ಅದು ಬರುವ ಸಾಧ್ಯತೆ ಇದೆ ಎಂದು ಡಾ.ಅಂಜನಾ ಹೇಳಿದರು.

ಪ್ರೀ-ಡಯಾಬಿಟಿಕ್ ಎಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆದರೆ ಟೈಪ್-2 ಮಧುಮೇಹ ಎಂದು ಪರಿಗಣಿಸುವಷ್ಟು ಹೆಚ್ಚಿಲ್ಲ. ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳದೇ ಹೋದರೆ ವಯಸ್ಕರು ಮತ್ತು ಮಕ್ಕಳು ಮಧುಮೇಹ ಪೀಡಿತರಾಗುತ್ತಾರೆ. ಆರೋಗ್ಯಕರ ಆಹಾರ ಪದ್ದತಿ ಜೀವನಶೈಲಿ ಮತ್ತು ವ್ಯಾಯಾಮ ಸೇರಿದಂತೆ ವಿವಿಧ ಅಂಶಗಳಿಂದ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಬಹುದು” ಎಂದು ಹಿರಿಯ ಮಧುಮೇಹ ತಜ್ಞ ಡಾ.ವಿ. ಮೋಹನ್  ವರದಿಯಲ್ಲಿ ತಿಳಿಸಿದ್ದಾರೆ.

ಅಧ್ಯಯನದ ಭಾಗವಾಗಿ, ಅಕ್ಟೋಬರ್ 18, 2008 ಮತ್ತು ಡಿಸೆಂಬರ್ 17, 2020 ರ ನಡುವೆ ಗ್ರಾಮೀಣ ಮತ್ತು ನಗರ ಪ್ರದೇಶದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಯಿತು.

2019 ರ ಸಮೀಕ್ಷೆಯ ಪ್ರಕಾರ 74 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.  ಈ ಬಾರಿ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ್ದು, ಫಲಿತಾಂಶಗಳು ಕ್ಷೇತ್ರ ಮಟ್ಟದಲ್ಲಿ ವಾಸ್ತವವನ್ನು ಬಿಂಬಿಸುತ್ತವೆ ಎಂದು ಡಾ.ಮೋಹನ್ ಹೇಳಿದ್ದಾರೆ.

ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಸ್ಥೂಲಕಾಯತೆಯಂತಹ ಇತರ ಅಪಾಯಕಾರಿ ಅಂಶಗಳೂ ಸಹ ಹೆಚ್ಚು. ಇದು ಹೃದಯ ಸ್ತಂಭನ, ಹೃದಯಾಘಾತ ಮತ್ತು ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ಸಮೀಕ್ಷೆಯಲ್ಲಿ, ಜನಸಂಖ್ಯೆಯ ಕನಿಷ್ಠ 35.5% ಬಿಪಿ,  81.2% ಮಂದಿಗೆ ಕೊಲೆಸ್ಟ್ರಾಲ್ (ಡಿಸ್ಲಿಪಿಡೆಮಿಯಾ), 28.6% ಬೊಜ್ಜು ಮತ್ತು 39.5% ಹೊಟ್ಟೆಯ ಬೊಜ್ಜು ಹೊಂದಿದ್ದರು.

ಇಂಡಿಯಾಬಿ (ಭಾರತ-ಮಧುಮೇಹ) ತಜ್ಞ ಸಮಿತಿ ಅಧ್ಯಕ್ಷ ಡಾ.ಅಶೋಕ್ ಕುಮಾರ್ ದಾಸ್ ಮಾತನಾಡಿ, ‘ಸಂತ್ರಸ್ತರ ಸಂಖ್ಯೆಯಲ್ಲಿ ರಾಜ್ಯಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ..ಆದ್ದರಿಂದ ಪ್ರತಿ ರಾಜ್ಯಗಳು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ‌ ಎಂದು ವರದಿಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಂವಿಧಾನದ ಆಶಯಗಳು ಭಾವನಾತ್ಮಕ ಆಚರಣೆಗೆ ಸೀಮಿತವಾಗದಿರಲಿ: ಡಾ. ಎಂ. ಎಸ್. ಶೇಖರ್

  ಶಂಕರಘಟ್ಟ, ನ. 26: ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಂವಿಧಾನದ ಆಶಯಗಳನ್ನು ಭಾವನಾತ್ಮಕ ಮಾತುಗಳಿಗೆ ಸೀಮಿತಗೊಳಿಸದೆ, ಬದ್ಧತೆಯೊಂದಿಗೆ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯನ್ನು ನಾವೆಲ್ಲರೂ ನಿರ್ವಹಿಸಬೇಕೆಂದು ಸಾಹಿತಿ ಮತ್ತು ಚಿಂತಕ ಡಾ. ಎಂ. ಎಸ್. ಶೇಖರ್

ಅಕ್ಕನೇನಿ ಕುಟುಂಬದಲ್ಲಿ ಎರಡೆರಡು ಸಂಭ್ರಮ : ಅಖಿಲ್ ಗೆ 2ನೇ ಎಂಗೇಜ್ಮೆಂಟ್.. ನಾಗಚೈತನ್ಯಗೆ 2ನೇ ಮದುವೆ..!

ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜು‌ನ ಮನೆಯಲ್ಲಿ ಈಗಾಗಲೇ ಮದುವೆ ಸಂಭ್ರಮ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ನಾಗಚೈತನ್ಯ ಹಾಗೂ ಶೋಭಿತಾ ಎಂಗೇಜ್ಮೆಂಟ್ ಆಗಿದ್ದು, ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಶೋಭಿತಾ ಮನೆಯಲ್ಲಿ

ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಬಿರುಕು : ಅಂಥದ್ದೇನಾಯ್ತು..?

ಬಾಗಲಕೋಟೆ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಮೂರುವರೆ ವರ್ಷದಿಂದ ನಡೆಯುತ್ತಿದೆ. ಸರ್ಕಾರಕ್ಕೆ ಸಾಕಷ್ಟು ಬಾರಿ ಕೊನೆಯ ಎಚ್ಚರಿಕೆಯನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ

error: Content is protected !!