Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಚ್ಚಬೋರನಹಟ್ಟಿಯಲ್ಲಿ ಜೂನ್ 6 ಮತ್ತು 7ರಂದು ಗುರುವಂದನಾ ಕಾರ್ಯಕ್ರಮ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭಾಗಿ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಜೂ.01 : ಶ್ರೀ ನಿರಂಜನಸ್ವಾಮಿ ಗದ್ದಿಗೆ ಟ್ರಸ್ಟ್ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಶಿವಪುರ ಸುಕ್ಷೇತ್ರ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ನಿರಂಜನಸ್ವಾಮಿ ಗದ್ದಿಗೆ ಅವದೂತ ಪೀಠದಲ್ಲಿ ಇದೇ ಜೂನ್ 6 ಮತ್ತು 7ರಂದು ಶ್ರೀ ಅಲಕ್ ನಿರಂಜನ ಸ್ವಾಮಿಯವರ 15ನೇ ವರ್ಷದ ಗುರುವಂದನಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯಪ್ಪ ಸ್ವಾಮಿಯವರ 8ನೇ ವರ್ಷದ ಹಾಗೂ ಶ್ರೀ ಈಗಲು ಸ್ವಾಮಿಯವರ 6ನೇ ವರ್ಷದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜೂನ್ 6ರಂದು ಮಂಗಳವಾರ ಸಂಜೆ 5 ಗಂಟೆಗೆ  ಗಂಗಾಪೂಜೆ, ಧ್ವಜಾರೋಹಣ ನಂತರ ಗದ್ಧಿಗೆಪೂಜೆ ಕಾರ್ಯಕ್ರಮ ನಡೆಯಲಿದೆ. ಜೂನ್ 7ರಂದು ಬುಧವಾರ ಬೆಳಿಗ್ಗೆ  ಶ್ರೀ ಸ್ವಾಮಿಯ ಭಕ್ತಾಧಿಗಳಿಂದ ಮೆರವಣಿಗೆ  ಮೂಲಕ ಶ್ರೀ ಗಾದ್ರಿಲಿಂಗೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಗದ್ದಿಗೆಗೆ ಆಗಮನ, ಸದ್ಭಕ್ತರ ಸಾನಿಧ್ಯದಲ್ಲಿ ಶ್ರೀಗಳ ಗದ್ದಿಗೆ ಪೂಜೆ ನಡೆಯಲಿದೆ.

ಜೂನ್ 6ರಂದು ರಾತ್ರಿ ಭಜನ ಕಾರ್ಯಕ್ರಮ: ಬಚ್ಚಬೋರನಹಟ್ಟಿ ಗಾದ್ರಿಲಿಂಗೇಶ್ವರ ಭಜನಾ ಮಂಡಳಿ, ಉಪ್ಪಾರಹಟ್ಟಿ ಭಜನಾ ಕಲಾ ಸಂಘ, ನೆಲಗೇತನಹಟ್ಟಿ ಭಜನ ಸಂಘ, ಪೇಲಾರಹಟ್ಟಿ ಭಜನ ಮಂಡಳಿ, ಹಿರಿಯೂರು ತಾಲ್ಲೂಕು ಖಂಡೇನಹಳ್ಳಿ ಭಜನಾ ಸಂಘ, ಚಳ್ಳಕೆರೆ ತಾಲ್ಲೂಕು ಬುಡ್ನಹಟ್ಟಿ ಭಜನಾ ಸಂಘ, ಹಿರಿಯೂರು ತಾಲ್ಲೂಕು ಯಲಕೂರನಹಳ್ಳಿ ಭಜನ ಸಂಘ ಹಾಗೂ ಕೊಂಡ್ಲಹಳ್ಳಿ ಭಜನ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷರು ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದಸ್ಯ ವೆಂಕಟೇಶ್, ಕರ್ನಾಗಟಕ ಕಾಂಗ್ರೆಸ್ ಎಸ್ ಟಿ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಬಸವರಾಜ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗಣ್ಯರು ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 8861127906, 7899411467, 8197320760 ಗೆ ಸಂಪರ್ಕಿಸಬಹುದು ಎಂದು ನಿರಂಜನಸ್ವಾಮಿ ಗದ್ದಿಗೆ ಟ್ರಸ್ಟ್ ಕಾರ್ಯದರ್ಶಿ ಡಿ.ಲಕ್ಷ್ಮಣ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Vastu Tips : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು ಗೊತ್ತಾ ?

ಸುದ್ದಿಒನ್ : ವಾಸ್ತು ಎಂದರೆ ಮನೆಗೆ ಮಾತ್ರವಲ್ಲದೇ ಮನೆಯಲ್ಲಿ ಇರುವ  ವಸ್ತುಗಳಿಗೂ ಕೂಡ ಅನ್ವಯಿಸುತ್ತದೆ.  ವಸ್ತುಗಳನ್ನು ಇರಿಸುವ ದಿಕ್ಕನ್ನು ಅವಲಂಬಿಸಿ, ಮನೆಗೆ ನಷ್ಟ ಮತ್ತು ಲಾಭವನ್ನು ಅಂದಾಜಿಸುತ್ತಾರೆ. ವಾಸ್ತು ಪ್ರಕಾರ, ಅನೇಕ ರೀತಿಯ ವಸ್ತುಗಳನ್ನು

ದಿನಕ್ಕೆ 2 ಬಾರಿ ಈ ಪಾನೀಯವನ್ನು ಕುಡಿದರೆ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…!

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಅಸಹ್ಯವಾಗಿ ಕಾಣುವುದಲ್ಲದೆ, ನಡೆಯಲು ಕಷ್ಟವಾಗುತ್ತದೆ.

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

error: Content is protected !!