ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮೇ.08) : ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಜಾಸ್ತಿಯಾಗುತ್ತಿರುವುದನ್ನು ಕಂಡು ವಿಚಲಿತರಾಗಿರುವ ಕಾಂಗ್ರೆಸ್‍ನ ಕೆಲವು ಗೂಂಡಾಗಳು ನಮ್ಮ ಪಕ್ಷದ ಕಾರ್ಯಕರ್ತ ಮಾದಿಗ ಸಮಾಜದ ಮುಖಂಡ, ಚಳ್ಳಕೆರೆ ಬಿಜೆಪಿ.ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಕಾರಿನ ಮೇಲೆ ಏಕಾಏಕಿ ಕಲ್ಲು ದೊಣ್ಣೆಗಳಿಂದ ದಾಳಿ ನಡೆಸಿರುವುದನ್ನು ಭಾರತೀಯ ಜನತಾಪಾರ್ಟಿ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಬಿಜೆಪಿ.ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ತಿಳಿಸಿದರು.
ಬಿಜೆಪಿ. ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಳೆ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಳ್ಳಕೆರೆಯಲ್ಲಿ ಭಾನುವಾರ ನಡೆದ ಯಾದವರ ಹಾಗೂ ಮಾದಿಗ ಜನಾಂಗದ ಸಮಾವೇಶ ಯಶಸ್ವಿಯಾಗಿದ್ದನ್ನು ಸಹಿಸಿಕೊಳ್ಳಲು ಆಗದ ಕಾಂಗ್ರೆಸ್ ತಾನೇ ಸೋಲು ಒಪ್ಪಿಕೊಂಡು ಇಂತಹ ಗೂಂಡ ಸಂಸ್ಕೃತಿಗೆ ಕೈಹಾಕಿದೆ.
ಇಡಿ ಜಿಲ್ಲೆಯಲ್ಲಿ ಬಿಜೆಪಿ. ಕಾರ್ಯಕರ್ತರಿಗೆ ಕಾಂಗ್ರೆಸ್‍ನ ಗೂಂಡಾಗಳು ಫೋನ್‍ನಲ್ಲಿ ಬೆದರಿಕೆ ಹಾಕುತ್ತಿರುವುದಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕ್ಷಿಯಿದ್ದು, ಗಡಿಪಾರಿಗೆ ಒತ್ತಾಯಿಸಲಾಗಿದೆ.
ತುರುವನೂರಿನಲ್ಲಿ ನಿನ್ನೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಕೆಲವು ರೌಡಿಗಳು ಕಾರಿನ ಮೇಲೆ ದಾಳಿ ನಡೆಸಿ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದರಿಂದ ತಲೆ, ಕಣ್ಣಿಗೆ ಪೆಟ್ಟು ಬಿದ್ದಿದ್ದು, ತುರುವನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುನಾವಣೆಗೆ ಎರಡು ದಿನ ಮುನ್ನ ಇಂತಹ ದುಷ್ಕøತ್ಯ ನಡೆದಿರುವುದಕ್ಕೆ ನಮ್ಮ ಕಾರ್ಯಕರ್ತರು ಯಾರು ಎದೆಗುಂದದೆ ಬೂತ್‍ಗಳಲ್ಲಿ ಗೆಲ್ಲಿಸುವ ಕೆಲಸ ಮಾಡುತ್ತಾರೆ.
ಈ ಕೃತ್ಯದ ಹಿಂದೆ ಯಾರ್ಯಾರಿದ್ದಾರೆನ್ನುವುದನ್ನು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೂ ದೂರು ನೀಡಿರುವುದಾಗಿ ಕೆ.ಎಸ್.ನವೀನ್ ಹೇಳಿದರು.
ಕಳೆದ ಎಂಟತ್ತು ದಿನಗಳಿಂದ ಜಿಲ್ಲೆಯಲ್ಲಿ ಬಿಜೆಪಿ. ಅಭ್ಯರ್ಥಿಗಳ ಪರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಕಾಂಗ್ರೆಸ್‍ನ ರೌಡಿಗಳು ಇಂತಹ ಹೀನ ಕೃತ್ಯಕ್ಕೆ ಇಳಿದಿದ್ದಾರೆ. ಪಕ್ಷ ಸಂಘಟನೆಯಲ್ಲಿ ಬಹಳ ವರ್ಷಗಳಿಂದ ಬೆಳೆದುಕೊಂಡು ಬಂದಿರುವ ಸೂರನಹಳ್ಳಿ ಶ್ರೀನಿವಾಸ್ ಹಂತ ಹಂತವಾಗಿ ಈಗ 160 ಬೂತ್ ಮೇಲೆ ಮಂಡಲ ಅಧ್ಯಕ್ಷರಾಗಿದ್ದಾರೆ.
ಚುನಾವಣೆಗೆ ಎರಡು ದಿನ ಮುನ್ನಾ ಇವರನ್ನೆ ಮುಗಿಸಬೇಕೆಂಬ ಸಂಚು ಹಾಕಿ ಕಾಂಗ್ರೆಸ್‍ನ ಗೂಂಡಾಗಳು ಹಲ್ಲೆಗೆ ಮುಂದಾಗಿದ್ದು, ಅಶಾಂತಿ ಸೃಷ್ಠಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ವಶಕ್ಕೆ ತೆಗೆದುಕೊಂಡು ಚುನಾವಣೆ ಮುಗಿಯುವನತಕ ಹೊರಗೆ ಬಿಡಬಾರದು. ಮೇಲ್ನೋಟಕ್ಕೆ ಇದು ವೈಯಕ್ತಿಕ ವಿಚಾರಕ್ಕೆ ಆಗಿರುವ ಘಟನೆಯಲ್ಲ. ಚುನಾವಣೆ ಹಿನ್ನೆಲೆಯಿಂದ ನಡೆದಿದೆ.
ಕಳೆದ 2 ರಂದು ಪ್ರಧಾನಿ ನರೇಂದ್ರಮೋದಿರವರು ಬಿಜೆಪಿ. ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ಕಂಡು ಕಾಂಗ್ರೆಸ್‍ಗೆ ನುಂಗಲಾರದ ತುಪ್ಪವಾಗಿದೆ.
ಸೂಕ್ತ ತನಿಖೆ ನಡೆಸಿದಾಗ ಮಾತ್ರ ಘಟನೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದು ಬಯಲಿಗೆ ಬರುತ್ತದೆ ಎನ್ನುವುದನ್ನು ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ನರೇಂದ್ರಹೊನ್ನಾಳ್, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.