ಬೆಂಗಳೂರು: ಅಕ್ರಮ ಹಣ ಸಾಗಾಟದ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಅಧಿಕಾರಿಗಳ ಕಣ್ಣಿಗೆ ಆಗಾಗ ಕೋಟ್ಯಾಂತರ ರೂಪಾಯಿ ಹಣ ಬೀಳುತ್ತಲೇ ಇದೆ. ಅಲ್ಲಿ ಇಲ್ಲಿ ಆಗಾಗ ದಾಳಿ ಯಾಗಿ ಹಣ ಸಿಕ್ಕಿ ಬೀಳುತ್ತಿದೆ. ಇದೀಗ ಐಟಿ ಅಧಿಕಾರಿಗಳು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಸಹೋದರಿ ಮನೆ ಮೇಲೂ ದಾಳಿ ನಡೆಸಿದ್ದಾರೆ. ಮಹತ್ತರವಾದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಎಸ್ ಎಂ ಕೃಷ್ಣ ಅವರ ಸಹೋದರಿ ಎಸ್ ಎಂ ಸುನೀತಾ ಅವರು ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಕೋರಮಂಗಲದಲ್ಲಿ ಅವರ ಮನೆ ಇದ್ದು, ಐಟಿ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬಾಗ್ಮನೆ ಹೆಸರಿನಲ್ಲಿರುವ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಸುಮಾರು ಎಂಟು ಅಧಿಕಾರಿಗಳ ತಂಡದಿಂದ ಈ ದಾಳಿ ನಡೆದಿದೆ. ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಸದ್ಯ ಪರಿಶೀಲನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣೆ ಇರುವ ಕಾರಣ, ಹಣ ಸಾಗಾಟ ಸೇರಿದಂತೆ ಇತ್ಯಾದಿ ಇತ್ಯಾದಿ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.