ಮಂಡ್ಯ: ಮತದಾನಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಹೀಗಾಗಿ ರಾಜಕೀಯ ಪಕ್ಷಗಳು ಜೋರು ಪ್ರಚಾರದಲ್ಲಿ ತೊಡಗಿವೆ. ಸಿದ್ದರಾಮಯ್ಯ ಇಂದು ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸುಮಲತಾ ವಿರುದ್ಧ ಹಾಗೂ ಪ್ರಧಾನಿ ಮೋದಿ ವಿರುದ್ಧ ಕೆಂಡಕಾರುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ. ಆದರೆ ಜನ ನನ್ನ ಮಾತು ಕೇಳಲಿಲ್ಲ. ಆಯಮ್ಮನ್ನ ಗೆಲ್ಲಿಸಿದ್ರು. ಅದು ಸರಿಯಲ್ಲ ಅಂತ ನಂಗೆ ಇವಾಗ ಅನ್ನಿಸ್ತಾ ಇದೆ. ಚೆಲುವರಾಯಸ್ವಾಮಿ, ನರೇಂದ್ರ ಎಲ್ಲರಿಗೂ ಜೆಡಿಎಸ್ ಪರ ನಿಲ್ಲುವಂತೆ ಹೇಳಿದ್ದೆ. ಆದ್ರೆ ಜನ ನನ್ನ ಮಾತನ್ನು ಕೇಳಲೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಬೀದಿ ಬೀದಿಯಲ್ಲಿ ಭ್ರಷ್ಟಚಾರದ ವಿಚಾರ ಚರ್ಚೆಯಾಗ್ತಿದೆ. ವಿಧಾನಸೌಧದ ಪ್ರತಿಗೋಡೆಗಳೂ ದುಡ್ಡು ದುಡ್ಡು ಅನ್ನುತ್ತಿವೆ. ಇಂತಹ 40 ಪರ್ಸೆಂಟ್ ಸರ್ಕಾರ ಇರಬೇಕಾ? ಮೋದಿ ಅಚ್ಚೇದಿನ್ ಆಯೇಗಾ ಅಂತಾರಲ್ಲ, ನಿಮಗೇನಾದ್ರು ಅಚ್ಚೇದಿನ್ ಬಂತೇನ್ರಪ್ಪ.? ಎಂದು ಪ್ರಶ್ನಿಸಿದ್ದಾರೆ.