ಕಾಂಗ್ರೆಸ್ ಪಕ್ಷ ನಿನ್ನೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡಿಗಡೆ ಮಾಡಿದೆ. ಆ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ್ರೆ ಭಜರಂಗ ದಳವನ್ನು ಬ್ಯಾನ್ ಮಾಡ್ತೀವಿ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಣಾಳಿಕೆ ತಯಾರಿ ಮಾಡಿದ ಸಮಿತಿ ಕ್ಷಮೆ ಕೇಳಿ, ಈಗಾಗಲೇ ಇದಕ್ಕೆ ನಮ್ಮ ಚೇರ್ಮನ್ ಸ್ಪಷ್ಟನೆ ನೀಡಿದ್ದಾರೆ. ಪುನಃ ಪುನಃ ಅದಕ್ಕೆ ನಾನು ಉತ್ತರ ಕೊಡುವುದಕ್ಕೆ ಹೋಗಲ್ಲ.
ರಾತ್ರಿ ಮಟನ್ ತಿಂದು ಬೆಳಗ್ಗೆ ನಾನ್ ವೆಜಿಟೇರಿಯನ್ ಅವರಿಗೇನೆ ಬೈತಾರೆ. ಇವೆಲ್ಲಾ ನಮ್ಮ ದೇಶದಲ್ಲಿ ವೋಟಿಂಗ್ ಗೋಸ್ಕರ ಯಾರು ಏನು ಬೇಕಾದರೂ ಹೇಳಬಹುದು. ಇದನ್ನು ಸ್ವಲ್ಪ ಯೋಚನೆ ಮಾಡಬೇಕು. ಬರೀ ಜಗಳ ಹಚ್ಚಿ ವೋಟ್ ಕೇಳುವುದು ಅಲ್ಲ. ಇಂತಹ ಕೆಲಸವನ್ನು ಬಿಜೆಪಿಗರು ಮಾಡುತ್ತಾರೆ ಎಂದಿದ್ದಾರೆ.
ಇದರ ಮಧ್ಯೆಯೇ ಭಜರಂಗದಳ ಬ್ಯಾನ್ ವಿಚಾರ ಏನಾದರೂ ಹೆಚ್ಚು ಕಡಿಮೆಯಾಗುತ್ತಾ ಎಂದು ಕಾಂಗ್ರೆಸ್ ನಾಯಕರು ಹೊಟೇಲ್ ಒಂದರಲ್ಲಿ ಸಭೆ ನಡೆಸುತ್ತಿದ್ದಾರೆ. ಹಿರಿಯ ನಾಯಕರು ಡ್ಯಾಮೇಜ್ ಕಂಟ್ರೋಲ್ ಗೆ ಸಭೆ ನಡೆಸುತ್ತಿದ್ದಾರೆ.