Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

18 ವರ್ಷದಿಂದ ವಾಸವಿದ್ದ ಮನೆ ಖಾಲಿ ಮಾಡಿ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ..!

Facebook
Twitter
Telegram
WhatsApp

ನವದೆಹಲಿ: ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಚೆಯಾದ ಹಿನ್ನೆಲೆ, ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಅವರು ವಾಸವಿದ್ದ ಸರ್ಕಾರಿ ಬಂಗಲೆಯನ್ನು ಇಂದು ಹಸ್ತಾಂತರ ಮಾಡಲಾಗಿದೆ. ಈ ವೇಳೆ ಸಿಬ್ಬಂದಿಗಳಿಗೆಲ್ಲಾ ಧನ್ಯವಾದ ತಿಳಿಸಿದ್ದಾರೆ.

2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಿ, ಲೋಕಸಭಾ ಸಂಸದರಾಗಿದ್ದರು. ಅಂದಿನಿಂದ ದೆಹಲಿಯ ತುಘಲಕ್ ರಸ್ತೆಯಲ್ಲಿರುವ ಬಂಗಲೆಯನ್ನು ನೀಡಲಾಗಿತ್ತು. ಸುಮಾರು ಹದಿನೆಂಟು ವರ್ಷಗಳ ಕಾಲ ಈ ಬಂಗಲೆ ಅಧಿಕೃತ ಸರ್ಕಾರಿ ನಿವಾಸವಾಗಿತ್ತು. ಈಗ ಸಂಸದ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆ ಸರ್ಕಾರಿ ನಿವಾಸ ಖಾಲಿ ಮಾಡಲು ಸಚಿವಾಲಯ ಏಪ್ರಿಲ್ 22 ಕೊನೆಯ ಗಡುವು ನೀಡಿತ್ತು.

ಹೀಗಾಗಿ ಇಂದು ರಾಹುಲ್ ಗಾಂಧಿ ಮನೆಯನ್ನು ಖಾಲಿ ಮಾಡಿದ್ದಾರೆ. ಮನೆಯಲ್ಲಿದ್ದ ಸಾಮಾನುಗಳನ್ನೆಲ್ಲಾ ಸಾಗಿಸಿದ ಮೇಲೆ, ಖಾಲಿ ಮನೆಯಲ್ಲಿ ರಾಹುಲ್ ಗಾಂಧಿ ಓಡಾಡಿದ್ದಾರೆ. ಬಳಿಕ ಎಲ್ಲಾ ಸಿಬ್ಬಂದಿಗಳಿಗೂ ಕೈಕುಲುಕಿ ಧನ್ಯವಾದ ತಿಳಿಸಿದ್ದಾರೆ. ಬಳಿಕ ಎಲ್ಲಾ ಸಿಬ್ಬಂದಿಯೊಂದಿಗೆ ಫೋಟೋಗೆ ಪೋಸ್ ನೀಡಿ, ಕಡೆಗೆ ಮನೆಯ ಬಾಗಿಲನ್ನು ತಾವೇ ಹಾಕಿ, ಕೀಯನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಜೊತೆಗೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಕೂಡ ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾವಣ ಪಾತ್ರಕ್ಕಾಗಿ ಯಶ್ ಹೆಚ್ಚಿಸಿಕೊಂಡಿದ್ದು ಬರೋಬ್ಬರಿ 15 ಕೆಜಿ..!

ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಸಿಕ್ಜಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಯಶ್ ಕೂಡ ಅದರಲ್ಲಿ ನಟಿಸುತ್ತಿದ್ದಾರೆ ಎಂಬ ಕಾರಣಕ್ಕೆ ಇನ್ನಷ್ಟು ಸದ್ದು ಮಾಡಿದೆ. ರಾವಣನ ಪಾತ್ರದಲ್ಲಿ ಯಶ್ ರಾಮಾಯಣದಲ್ಲಿ ನಟಿಸಲು ಒಪ್ಪಿದ್ದಾರೆ. ಆದರೆ

ಮಾದವಾರದಲ್ಲಿ ಸಿಕ್ಕ ಕೋಟಿ ಕೋಟಿ ಹಣ : ಮೆಸೇಜ್ ಮಾಡಿ, ಕಾಲ್ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ಕೆ‌.ಸುಧಾಕರ್..?

ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಕಂತೆವಕಂತೆ ಹಣ ಸಾಗಾಣೆಯಾಗುವುದು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಹಣ ಸಾಗಾಟ ನಡೆಯುತ್ತದೆ ಎಂದೇ ಪೊಲೀಸರು ಹದ್ದಿನ ಕಣ್ಣು ಇಡುತ್ತಾರೆ. ಏಪ್ರಿಲ್ 25ರಂದು ಬಿಜೆಪಿ ಮುಖಂಡನ ಮನೆಯಲ್ಲಿ ಕೋಟಿ ಕೋಟಿ

ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಹಣ ಬಿಡುಗಡೆ : ಕೇಳಿದ್ದು ಎಷ್ಟು ಕೋಟಿ, ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ..?

ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 3,454 ಕೋಟಿ ಹಣ ಬಿಡುಗಡೆ

error: Content is protected !!