ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಏ.08): ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನನಗೆ ಟಿಕೆಟ್ ಸಿಕ್ಕಿರುವುದರ ಹಿಂದೆ ನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೈಯದ್ ಅಲ್ಲಾಭಕ್ಷಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಇವರುಗಳ ಶ್ರಮ ಬಹಳಷ್ಟಿದೆ ಎಂದು ಕೆ.ಸಿ.ವೀರೇಂದ್ರ ಪಪ್ಪಿ ಹೇಳಿರುವುದು ಮುಸ್ಲಿಂ ಸಮುದಾಯಕ್ಕೆ ಅಪಾರ ನೋವುಂಟಾಗಿದೆ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಎಂ.ಹನೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಶನಿವಾರ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ನಾಲ್ಕೈದು ಬಾರಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷರಾದರು, ಜಾಮಿಯ ಮಸೀದಿ ಮುತುವಲ್ಲಿಗಳು, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ರಾಜ್ಯ ಸಮಿತಿ ಸದಸ್ಯ ಕೆ.ಅನ್ವರ್ ಪಾಷ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಸಿ.ಓ.ಬಾಬು ಸೇರಿದಂತೆ ವಿವಿಧ ಸಂಘಟನೆಗಳಿವೆ.
ನಮ್ಮ ಧರ್ಮದ ಎಲ್ಲಾ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆ.ಸಿ.ವೀರೇಂದ್ರಪಪ್ಪಿ ಚುನಾವಣೆಯನ್ನು ಎದುರಿಸಬೇಕೆ ವಿನಃ ಕೇವಲ ಇಬ್ಬರಿಂದ ಮತ ಪಡೆದು ಗೆಲ್ಲಲು ಸಾಧ್ಯವಿಲ್ಲ. ಯಾರನ್ನೋ ಹೊಗಳಿ ಮನಸ್ಸು ಮೆಚ್ಚಿಸಲು ಹೊರಟಿರುವುದರಲ್ಲಿ ಅರ್ಥವಿಲ್ಲ ಎಂದು ಎಂ.ಹನೀಫ್ ಹೇಳಿಕೆಯನ್ನು ಆಕ್ಷೇಪಿಸಿದರು.
ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಆಗದವರನ್ನು ಹಿಂದಿಟ್ಟುಕೊಂಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಕಾಂಗ್ರೆಸ್ ಟಿಕೆಟ್ ಸಿಕ್ಕಿರುವುದರ ಹಿಂದೆ ಇಬ್ಬರ ಶ್ರಮ ಅಡಗಿದೆ ಎಂದು ಹೇಳಿರುವುದು ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ.
ಮುಂದಿನ ದಿನಗಳಲ್ಲಿ ನಮ್ಮ ಜನಾಂಗದ ಸಾವಿರ ಜನರನ್ನು ಸೇರಿಸಿ ಹೋರಾಟ ಮಾಡುವುದರ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈಗಲಾದರೂ ಕೆ.ಸಿ.ವೀರೇಂದ್ರ ಪಪ್ಪಿ ಕೇವಲ ಕೆಲವೇ ಕೆಲವರನ್ನು ಓಲೈಸಿಕೊಳ್ಳುವಂತ ಹೇಳಿಕೆಗಳನ್ನು ನೀಡಬಾರದು ಎಂದು ಎಚ್ಚರಿಸಿದರು.
ಹೈದರ್‍ಷಾವಲಿ ದರ್ಗಾ ಕಾಂಪ್ಲೆಕ್ಸ್ ನ ಪ್ರಧಾನ ಕಾರ್ಯದರ್ಶಿ ನಯಾಜ್‍ವುದ್ದಿನ್, ಜಿಲ್ಲಾ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಅಪ್ಸರ್ ಕರೀಂ, ಜಿಲ್ಲಾ ಪಿಂಜಾರ ಜನಾಂಗದ ಅಧ್ಯಕ್ಷ ಟಿ.ರಶೀದ್‍ಸಾಬ್, ಮಂಡಕ್ಕಿಭಟ್ಟಿಯ ಹುಸೇನ್‍ಪೀರ್, ಆರ್.ಎಂ.ಡಿ.ಇಂಡಸ್ಟ್ರಿಸ್‍ನ ಹಾಜಿ ಆರ್.ದಾದಪೀರ್, ಸಾಬುಲಾಲ್, ಪಟೇಲ್‍ಸಾಬ್, ಮೊಹಮದ್ ಸೈಫುಲ್ಲಾ ಸಭೆಯಲ್ಲಿ ಭಾಗವಹಿಸಿದ್ದರು.