ಬೆಂಗಳೂರು: ಸಾಕಷ್ಟು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ನಟ ಅತ್ಯಜಿತ್ ಇಂದು ಕೊನೆಯುಸಿರೆಳೆದಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತವೆಂದೆ ಹೇಳಬಹುದು.
72ರ ಪ್ರಾಯದಲ್ಲಿ ಸತ್ಯಜಿತ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯ ದಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ, ಬೌರಿಂಗ್ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ 2 ಘಂಟೆಗೆ ಕೊನೆಯುಸಿರೆಳೆದ್ದಾರೆ.
ಸತ್ತಜಿತ್ 650ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದರು. ಪುಟ್ನಂಜ, ಆಪ್ತಮಿತ್ರ, ಅಪ್ಪು, ಅಭಿ, ಯುದ್ಧಕಾಂಡ, ಪೊಲೀಸ್ ಸ್ಟೋರಿ, ಮಾಣಿಕ್ಯ, ಇಂದ್ರಜಿತ್, ಯುದ್ಧಕಾಂಡ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಖಡಕ್ ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಇಂದು ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.
ಹೆಗೆಡೆ ನಗರದ ಖಬರ್ ಸ್ಥಾನ್ದಲ್ಲಿ ಸತ್ಯಜಿತ್ರ ಅಂತ್ಯ ಸಂಸ್ಕಾರ ನಡೆಯಲಿದೆ. ತನ್ನದೇ ಆದ ವಿಶಿಷ್ಠ ಶೈಲಿಯ ನಟನೆಯಿಂದ ಕೋಟ್ಯಾಂತರ ಕನ್ನಡಿಗರ ಮನಗೆದ್ದಿದ್ದ ಸತ್ಯಜಿತ್ ಇನ್ನು ಬರೀ ನೆನಪು ಮಾತ್ರ. ಹಿರಿಯ ನಟನ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.