ಬೆಂಗಳೂರು: ಬೇಡಿಕೆ ಹೆಚ್ಚಾದಷ್ಟು ಬೆಲೆ ಜಾಸ್ತಿಯಾಗುತ್ತೆ ಎನ್ನುವ ಮಾತಿದೆ. ಅದರಂತೆ ಚಿನ್ನದ ಬೆಲೆ ಏರಿಕೆಯಾಗುತ್ತಾ ಹೋಗುತ್ತಿದ್ದರು, ಎಲ್ಲಿಯೂ ಡಿಮ್ಯಾಂಡ್ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಹೆಣ್ಣು ಮಕ್ಕಳಲ್ಲಿ ಒಡವೆ ಇಷ್ಟ ಇಲ್ಲ ಎಂದು ಹೇಳುವವರೇ ಇಲ್ಲ. ಇದೀಗ ಚಿನ್ನದ ಬೆಲೆ ನೋಡುತ್ತಾ ಇದ್ರೆ ರೇಟು ಮತ್ತೆ ಮತ್ತೆ ಏರಿಕೆಯಾಗುತ್ತಾನೆ ಇದೆ.
ಮುಂದಿನ ತಿಂಗಳು ಅಕ್ಷಯ ತೃತೀಯ ಇದೆ. ಪ್ರತಿ ಅಕ್ಷಯ ತೃತೀಯಾಗೆ ಹೆಣ್ಣು ಮಕ್ಕಳು ಒಡವೆ ತೆಗೆದುಕೊಳ್ಳುವುದು ಕೆಲವೊಬ್ಬರು ವಾಡಿಕೆ ಮಾಡಿಕೊಂಡಿರುತ್ತಾರೆ, ಇನ್ನು ಕೆಲವೊಂದಿಷ್ಟು ಜನ ಆಸೆಯಿಟ್ಟುಕೊಂಡಿರುತ್ತಾರೆ. ಆದ್ರೆ ನಿನ್ನೆ ಇದ್ದ ಹಳದಿ ಲೋಹದ ಬೆಲೆ ದಿಢೀರ್ ಅಂತ ಏರಿಕೆಯಾಗಿದೆ.
ಭಾರತದಲ್ಲಿ ಪ್ರತಿ ಹತ್ತು ಗ್ರಾಂಗೆ 60 ಸಾವಿರ ದಾಟಿದೆ. ಕಳೆದ ವಾರ ದೆಹಲಿಯಲ್ಲಿ ಪ್ರತಿ ಹತ್ತು ಗ್ರಾಂಗೆ 58,700 ರೂ. ಇತ್ತು. ಈಗ 60,100 ಆಗಿದ್ದು, 1,400 ಏರಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿ ಮೇಲೂ ಬೆಲೆ ಜಾಸ್ತಿಯಾಗಿದ್ದು, 69,340ರೂ ಆಗಿದೆ. ಅಕ್ಷಯ ತೃತೀಯಗಾಗಲೀ, ಮದುವೆಗಳಿಗಾಗಲೀ ಬಡವರು, ಮಧ್ಯಮ ವರ್ಗದವರು ಚಿನ್ನ ಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ.