ಬೆಂಗಳೂರು: ಮಾಡಾಳು ಪ್ರಶಾಂತ್ ಮನೆಯಲ್ಲಿ ಆರು ಕೋಟಿ ಹಣ ಸಿಕ್ಕಿದೆ. ಆ ಕಡೆ ಶಾಸಕ ವಿರೂಪಾಕ್ಷಪ್ಪ ಎಸ್ಕೇಪ್ ಆಗಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿರುವಾಗಲೇ ತನಿಖಾಧಿಕಾರಿಗಳ ಬದಲಾವಣೆಯಾಗಿರವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೇವಲ ನಾಲ್ಕು ದಿನದಲ್ಲಿ ಇಬ್ಬರು ತನಿಖಾಧಿಕಾರಿಗಳ ಬದಲಾವಣೆಯಾಗಿದೆ.
ಪ್ರಕರಣದ ತನಿಖಾಧಿಕಾರಿಗಳಾಗಿದ್ದ DYSP ಆಂಥೋನಿ ಜಾನ್ ಹಾಗೂ inspector ಬಾಲಾಜಿ ಬಾಬು ಅವರನ್ನು ಬದಲಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ರೆಡ್ ಹ್ಯಾಂಡ್ ಆಗಿ ತಗಲಾಕಿಕೊಂಡ ಪ್ರಶಾಂತ್ ಸೇರಿದಂತೆ ಐದು ಜನ ಜೈಲಿನಲ್ಲಿದ್ದಾರೆ. ಆದ್ರೆ ಎ1 ಆರೋಪಿಯಾಗಿರುವ ಮಾಡಾಳು ವಿರೂಪಾಕ್ಷಪ್ಪ ಇನ್ನು ಯಾರ ಕೈಗೂ ಸಿಕ್ಕಿಲ್ಲ. ಈ ಎಲ್ಲಾ ಬೆಳವಣಿಗೆಯ ನಡುವೆ ತನಿಖಾಧಿಕಾರಿಗಳೇ ಬದಲಾಗಿದ್ದಾರೆ.
ಮಾಡಾಳು ವಿರೂಪಾಕ್ಷಪ್ಪ ಸದ್ಯ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದು, ಅಜ್ಞಾತ ಸ್ಥಳದಿಂದಾನೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಂದು ಆ ಅರ್ಜಿ ವಿಚಾರಣೆ ನಡೆಯಲಿದೆ. ಜೈಲಾ..? ಸೇಫಾ ಎಂಬುದು ಇಂದೇ ತಿಳಿಯಲಿದೆ.