Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಂದೂಗಳು ಸಂಘಟಿತರಾಗಿ ಒಂದಾಗಬೇಕೆಂಬುದು ಜ.ರಾ.ರಾಮಮೂರ್ತಿಯವರ ಮಹದಾಸೆಯಾಗಿತ್ತು : ಶಿವಲಿಂಗಾನಂದ ಮಹಾಸ್ವಾಮಿಗಳು

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಹಿಂದೂಗಳು ಸಂಘಟಿತರಾಗಿ ಒಂದಾಗಬೇಕೆಂಬ ಮಹದಾಸೆ ಜ.ರಾ.ರಾಮಮೂರ್ತಿಯವರಲ್ಲಿತ್ತು ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಹೇಳಿದರು.

ವಿಶ್ವಹಿಂದೂ ಪರಿಷತ್ ಕರ್ನಾಟಕ ಪ್ರಾಂತ್ಯ ಸಮಿತಿ ಸದಸ್ಯರು, ಚಿತ್ರದುರ್ಗ ಹಿಂದೂ ಮಹಾಗಣಪತಿ ಗೌರವಾಧ್ಯಕ್ಷರು, ವಿಶ್ವಹಿಂದೂ ಪರಿಷತ್, ವೀರಮದಕರಿ ಸೇವಾ ಟ್ರಸ್ಟ್ ಅಧ್ಯಕ್ಷರಾಗಿದ್ದ ಜ.ರಾ.ರಾಮಮೂರ್ತಿರವರಿಗೆ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಭಾವಪೂರ್ಣ ಶ್ರದ್ದಾಂಜಲಿಯ ಸಾನಿಧ್ಯ ವಹಿಸಿ ಮಾತನಾಡಿದರು.

ಜ.ರಾ.ರಾಮಮೂರ್ತಿರವರು ತಯಾರು ಮಾಡಿರುವ ಪಡೆ ನಿಷ್ಠೆಯಿಂದ ಕೆಲಸ ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ನುಡಿನಮನ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಮಾತನಾಡಿ ತಲೆಮಾರಿನಿಂದ ತಲೆಮಾರಿಗೆ, ಶತಕದಿಂದ ಶತಕಕ್ಕೆ ಪೂರ್ವಜರು ಶ್ರೇಷ್ಠವಾದ ಬದುಕನ್ನು ಯುವ ಪೀಳಿಗೆಗೆ ಕೊಟ್ಟು ಹೋಗಿದ್ದಾರೆ. ಅದೇ ರೀತಿ ಜ.ರಾ.ರಾಮಮೂರ್ತಿ ಕೂಡ ಹಿಂದೂಗಳು ಒಟ್ಟಾಗಬೇಕೆಂಬ ಕನಸು ಕಂಡವರು. ಹಿಂದೂ ಸಮಾಜ, ಆರ್.ಎಸ್.ಎಸ್. ವಿಶ್ವಹಿಂದೂ ಪರಿಷತ್ ವಿಶಾಲವಾದ ಸಾಗರವಿದ್ದಂತೆ. ಯಾರು ಆತ್ಮಹತ್ಯೆ, ಮತ್ತೊಬ್ಬರಿಂದ ಹತ್ಯೆ, ಅಪಘಾತ, ಕೊರೋನಾದಂತ ಕೆಟ್ಟ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಬಾರದು. ಇದರಿಂದ ಬಚಾವಾಗಲು ಎಚ್ಚರಿಕೆ ವಹಿಸಬೇಕು. ವಾರಸಿಕೆಯನ್ನು ಮುಂದಿನ ಪೀಳಿಗೆಗೆ ಕೊಡುವ ಜವಾಬ್ದಾರಿ ನಮ್ಮದು. ಹಿಂದೂ ಸಮಾಜದ ಕಲ್ಯಾಣವಾದರೆ ಜಗತ್ತಿನ ಕಲ್ಯಾಣವಾದಂತೆ ಎಂದು ಬಲವಾಗಿ ನಂಬಿದ್ದವರು ಜ.ರಾ.ರಾಮಮೂರ್ತಿ ಎಂದು ಸ್ಮರಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಜಿಲ್ಲಾ ಸಂಘ ಚಾಲಕ ನಾಗೇಶ್ ಮಾತನಾಡುತ್ತ ಜ.ರಾ.ರಾಮಮೂರ್ತಿರವರಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಸಿಕ್ಕಿದೆ. ಹಿಂದೂ ಸಮಾಜದ ಕಾರ್ಯ ಮಾಡಬೇಕೆನ್ನುವುದು ಅವರ ಮನಸ್ಥಿತಿಯಾಗಿತ್ತು. ದೇವಸ್ಥಾನಗಳ ನಿರ್ಮಾಣದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದರು. ತಾತ, ಮುತ್ತಜ್ಜನ ಕಾಲದ ಸಂಸ್ಕøತಿ ಮುಂದುವರೆಯಬೇಕೆಂಬುದು ಅವರ ಆಸೆ. ಕಾರ್ಯಕರ್ತರನ್ನು ರೌಡಿಶೀಟರ್‍ನಿಂದ ತೆಗೆಸಬೇಕೆಂಬು ತಳಮಳ ಅವರದಾಗಿತ್ತು. ಹಿಂದೂ ಸಮಾಜ ಬಲಿಷ್ಠವಾಗಬೇಕೆಂಬ ಅವರ ತುಡಿತವನ್ನು ಕಾರ್ಯಕರ್ತರು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.

ಭಜರಂಗದಳದ ಜಿಲ್ಲಾ ಸಂಚಾಲಕ ಟಿ.ಭದ್ರಿನಾಥ್ ಮಾತನಾಡಿ ಸಂಘಟನೆ ಸಿದ್ದಾಂತದ ವಿಚಾರದಲ್ಲಿ ಜ.ರಾ.ರಾಮಮೂರ್ತಿರವರಲ್ಲಿ ಬದ್ದತೆಯಿತ್ತು. ಪ್ರತಿ ಹಂತದಲ್ಲೂ ಕಾರ್ಯಕರ್ತರಿಗೆ ಪ್ರೀತಿ, ವಿಶ್ವಾಸ, ಮಾರ್ಗದರ್ಶನ ಹಂಚುತ್ತಿದ್ದರು. ಬೇರೆಯವರಿಗೆ ಮಾದರಿಯಾಗಿದ್ದ ಅವರೊಬ್ಬ ಹಿರಿಯ ಕಾರ್ಯಕರ್ತರು. ಜಗಳೂರು, ಭದ್ರಾವತಿಯಲ್ಲಿ ದೇವಸ್ಥಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನೆನಪಿಸಿಕೊಂಡರು.

ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಪ್ರಭಂಜನ್ ಮಾತನಾಡುತ್ತ ಇಂಜಿನಿಯರಿಂಗ್ ಪದವೀಧರರಾಗಿದ್ದ ಜ.ರಾ.ರಾಮಮೂರ್ತಿ ಜಗಳೂರಿನವರು. ಆಲಮಟ್ಟಿ, ಅಪ್ಪರ್‍ಕೃಷ್ಣ, ಮಲಪ್ರಭ, ತುಂಗಭದ್ರಾ ಪ್ರಾಜೆಕ್ಟ್, ಮಂಗಳೂರು, ಬೆಂಗಳೂರು ಸೇರಿದಂತೆ ನಾಡಿನ ಹಲವಾರು ಕಡೆ ಸೇವೆ ಸಲ್ಲಿಸಿದ್ದಾರೆ. ಹಿಂದೂಗಳು ಸಮಸ್ಯೆ ಎದುರಿಸಬಾರದೆನ್ನುವ ಕಾರಣಕ್ಕಾಗಿ ಕಾರ್ಯಕರ್ತರ ಪಡೆ ಕಟ್ಟಿದರು. ಸಾಕಷ್ಟು ಬಡವರಿಗೆ, ಧೀನ ದಲಿತರಿಗೆ ನೆರವಾದವರು. ಸಂಘಟನೆ ಗಟ್ಟಿಗೊಳಿಸುವುದಕ್ಕಾಗಿ ಸದಾ ಕಾರ್ಯಕರ್ತರ ಒಡನಾಟದಲ್ಲಿರುತ್ತಿದ್ದರು.

ವಿಶ್ವಹಿಂದೂ ಪರಿಷತ್, ಭಜರಂಗದಳ ಗಟ್ಟಿಯಾಗಿ ಕಾರ್ಯಕರ್ತರಿಗೆ ನೆಲೆ ಬೇಕು ಎನ್ನುವ ಹಂಬಲ ಅವರದಾಗಿತ್ತು. ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಜ.ರಾ.ರಾಮಮೂರ್ತಿ ಸಾಮಾನ್ಯ ಕಾರ್ಯಕರ್ತನಂತೆ ಸಂಘಟನೆ ಮಾಡಿದರು ಎಂದು ಗುಣಗಾನ ಮಾಡಿದರು.

ಕ್ಷೇತ್ರೀಯ ಧಾರ್ಮಿಕ ವಿಭಾಗ ಪ್ರಮುಖ್ ಬಸವರಾಜ್, ಸಂದೀಪ್, ರುದ್ರೇಶ್, ಬಾಲಕೃಷ್ಣ, ಕೇಶವ್, ಓಂಕಾರ್, ಅಶೋಕ್ ವಿಠಲ್, ಕೆ.ಎನ್.ವಿಶ್ವನಾಥಯ್ಯ, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಟಿ.ಜಿ.ನರೇಂದ್ರನಾಥ್ ಹಾಗೂ ಜ.ರಾ.ರಾಮಮೂರ್ತಿರವರ ಕುಟಂಬದವರು ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರನೇ ಬಾರಿಗೆ ಸೋತ ನಿಖಿಲ್ ಕುಮಾರಸ್ವಾಮಿ…!

ಸುದ್ದಿಒನ್ | ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಜೊತೆಗೆ ದೇಶಾದ್ಯಂತ ವಿವಿಧ ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಕರ್ನಾಟಕದಲ್ಲಿ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

error: Content is protected !!