ಬೆಂಗಳೂರು: ಮಿಷನ್ 123 ಪ್ರಕಾರ ಅವಕಾಶ ಕೊಟ್ಟರೆ, ಪಂಚತಂತ್ರ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದರು.
ಈ ವೇಳೆ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದ್ದೆವು,ಆ ವೇಳೆ ಇದನ್ನೆಲ್ಲ ನಿರೀಕ್ಷೆ ಮಾಡಿರಲಿಲ್ಲ.
ಅಧಿಕಾರಕ್ಕೆ ಬಂದರೆ 28 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇನೆ ಎಂದಿದ್ರು ಕುಮಾರಸ್ವಾಮಿ, ಕುಮಾರಸ್ವಾಮಿ ಮಾತು ನನಗೆ ನಂಬಲು ಆಗಿರಲಿಲ್ಲ
ಹೇಗೆ ಸಾಲಮನ್ನಾ ಮಾಡುತ್ತಾನೆ ಎಂದು ಅನುಮಾನ ಇತ್ತು
ಹೇಗೆ ಅಷ್ಟೊಂದು ಹಣ ಹೊಂದಿಸುತ್ತಾರೆ ಎಂದು,ಆದರೆ ವಿಧಿಯಾಟವೇ ಬೇರೆ ಇತ್ತು
ನಿಚ್ಚಳ ಬಹುಮತ ಕಳೆದ ಬಾರಿ ಆಗಲಿಲ್ಲ ಎಂದರು.
ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿಗೆ ಹೇಳಿದ್ದೇನೆ.ಕಾಂಗ್ರೆಸ್‌ಗೆ ಹೆಚ್ಚು ಸೀಟುಗಳು ಬಂದಿದ್ದವು. ನಾವು ಮುಖ್ಯಮಂತ್ರಿ ಸ್ಥಾನ ಪಡೆದರೆ ಅಭಾಸ ಆಗುತ್ತದೆ. ಹೀಗಾಗಿ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದಿದ್ದೆ
ಖರ್ಗೆಯವರು ಕೂಡ ಅದಕ್ಕೆ ಒಪ್ಪಿದ್ದರು.ಸೋನಿಯಾ ಗಾಂಧಿಗೆ ಒಪ್ಪಿಸುತ್ತೇನೆ ಎಂದು ಗುಲಾಮ್‌ನಬಿ ಆಜಾದ್ ಹೇಳಿದರು.ಕುಮಾರಸ್ವಾಮಿ ಸಿಎಂ ಆಗಬೇಕೆಂದು ಒಪ್ಪಿಸಿದರು.
ನೂರಾರು ಸೀಟು ಇಟ್ಟುಕೊಂಡಿದ್ದ ಯಡಿಯೂರಪ್ಪ ವಿಪಕ್ಷ ನಾಯಕ ಆದರು, ಸಾಲಮನ್ನಾ ಮಾಡುತ್ತಿರಾ ಇಲ್ವಾ ಎಂದು ಏಕವಚನದಲ್ಲೇ ಮಾತನಾಡಿದ್ದರು,ಯಡಿಯೂರಪ್ಪ ಏಕವಚನದಲ್ಲಿ ಮಾತನಾಡಿದ್ದನ್ನು ಟಿವಿಯಲ್ಲೇ ನೋಡಿದ್ದೆ ಬಜೆಟ್ ವಿಷಯದಲ್ಲಿ ಕೂಡ ಸಿದ್ದರಾಮಯ್ಯ ಷರತ್ತು ಹಾಕಿದ್ದರು. ಸಿದ್ದರಾಮಯ್ಯ ಅವರ ಎಲ್ಲ ಭಾಗ್ಯಗಳನ್ನು ಮುಂದುವರಿಸಲು ಷರತ್ತು ಇತ್ತು
ಸಿದ್ದರಾಮಯ್ಯ ಅವರ 50 ಸಾವಿರ ಸಾಲಮನ್ನಾ ಜೊತೆಗೆ ಕುಮಾರಸ್ವಾಮಿ ಕೂಡ ಸಾಲಮನ್ನಾ ಮಾಡಿದರು ಎಂದರು.