ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಶುರುವಾಗಿ ನಾಳೆಗೆ ಒಂದು ವರ್ಷ. ಅದೆಷ್ಟೋ ಸಾವಿರ ಜನ ಈ ಯುದ್ಧದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಆದ್ರೂ ಕೂಡ ಇನ್ನು ಯುದ್ಧ ನಿಂತಿಲ್ಲ. ಉಕ್ರೇನ್ ಸಣ್ಣ ದೇಶವಾದರೂ ತಮ್ಮ ಜನರನ್ನು ರಕ್ಷಿಸಿಕೊಳ್ಳಲು, ತಮ್ಮ ದೇಶ ಉಳಿಸಿಕೊಳ್ಳುವುದಕ್ಕೆ ಶಕ್ತಿಮೀರಿ ಯುದ್ಧ ನಡೆಸುತ್ತಲೇ ಇದೆ.
ಇತ್ತಿಚೆಗಷ್ಟೇ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್ ಗೆ ಭೇಟಿ ನೀಡಿ, ಯುದ್ಧಪೀಡಿತ ಪ್ರದೇಶವನ್ನು ವೀಕ್ಷಿಸಿ, ಮತ್ತಷ್ಟು ಸಹಾಯದ ಭರವಸೆಯನ್ನು ನೀಡಿ, ಹೋಗಿದ್ದರು. ಇದೀಗ ರಷ್ಯಾಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಭೇಟಿ ನೀಡುತ್ತಿದ್ದಾರೆ. ಈ ಭೇಟಿ ಹಲವು ಕುತೂಹಲಕ್ಕೆ ಕಾರಣವಾಗಿದೆ.
ಚೀನಾದ ಉನ್ನತ ಅಧಿಕಾರಿ ವಾಂಗ್ ಯಿ ಅವರು ಮಾಸ್ಕೋಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡುವಾಗ ಅಧ್ಯಕ್ಷರ ಭೇಟಿ ಬಗ್ಗೆ ಸುಳಿವು ನೀಡಿದ್ದಾರೆ. ರಷ್ಯಾ ಅಧ್ಯಕ್ಷ ಪುಟೀನ್ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂಬಂಧ ವಾಲ್ ಸ್ಟ್ರೀಟ್ ಎಂಬ ಜರ್ನಲ್ ವರದಿ ಮಾಡಿದ್ದು, ಬಹುಪಕ್ಷೀಯ ಮಾತುಕತೆಗಾಗಿ ಜಿನ್ ಪಿಂಗ್ ಬರುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಪುಟೀನ್ ಜೊತೆಗೆ ಮಾತನಾಡಲಿದ್ದಾರೆ ಎನ್ನಲಾಗಿದೆ.
ಇನ್ನು ಈ ಸಂಬಂಧ ರಷ್ಯಾ ಅಧ್ಯಕ್ಷ ಪುಟೀನ್ ಮಾತನಾಡಿದ್ದು, ಎಲ್ಲವೂ ಕೂಡ ಬೆಳವಣಿಗೆಯಲ್ಲಿದೆ. ನಾವೂ ದೇಶಕ್ಕೆ ಹೊಸ ಗಡಿಯನ್ನು ಪಡೆಯುತ್ತಿದ್ದೇವೆ ಎಂದಿದ್ದಾರೆ.