Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಬೋಧಿವೃಕ್ಷದ ಕೆಳಗೆ ಪರಿಷ್ಕೃತ ಆವೃತ್ತಿ ಗ್ರಂಥ ಲೋಕಾರ್ಪಣೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ, ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಫೆ.18): ಜಗತ್ತಿನ ಒಂದು ಭಾಗದಲ್ಲಿ ನಡೆಯುವ ಯಾವುದೋ ಒಂದು ಘಟನೆಯ ಪರಿಣಾಮ ಜಗತ್ತಿನಾದ್ಯಂತ ವ್ಯಾಪಿಸುತ್ತದೆ ಎನ್ನುವ ತಾತ್ವಿಕ ಚಿಂತನೆ ಈ ಪುಕ್ತದಲ್ಲಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ, ಹಿರಿಯ ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ತಿಳಿಸಿದರು.

ಮುಕ್ತ ವೇದಿಕೆ ಚಿತ್ರದುರ್ಗ, ಏಕಾಂತಗಿರಿ ಟ್ರಸ್ಟ್ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಬೋಧಿವೃಕ್ಷದ ಕೆಳಗೆ 1998 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಪರಿಷ್ಕೃತ ಆವೃತ್ತಿ ಗ್ರಂಥ ಲೋಕಾರ್ಪಣಾ ಕಾರ್ಯಕ್ರಮವನ್ನು ಶನಿವಾರ ಪತ್ರಕರ್ತರ ಭವನದಲ್ಲಿ ಉದ್ಗಾಟಿಸಿ ಮಾತನಾಡಿದರು.

ಮಾಲೀಕ ಮತ್ತು ಕಾರ್ಮಿಕರ ನಡುವೆ ಭಿನ್ನಾಭಿಪ್ರಾಯಗಳು ಕಂಡು ಬಂದಾಗ ಕೊನೆಗೆ ಮಾಲೀಕತ್ವ ನಾಶವಾಗುತ್ತದೆ. ಯಾವುದೇ ಒಂದು ಘಟನೆ ಬಿಗಿಯಾಗಿ ಉಳಿಯುವುದಿಲ್ಲ. ವಿಸ್ತರಿಸುತ್ತದೆ. ಆಧುನಿಕ ವಿಜ್ಞಾನ, ಅರ್ಥಶಾಸ್ತ್ರ ಕೂಡ ಮೂಢನಂಬಿಕೆಗಳನ್ನು ಕೊಟ್ಟಿದೆ. ಸೌಕರ್ಯ ಸಲಕರಣೆಗಳು ಹೆಚ್ಚಾದಾಗ ಜೀವನದ ವ್ಯತ್ಯಾಸ ಗೊತ್ತಾಗುತ್ತದೆ. ಅಧಿಕಾರ ರಾಜಕಾರಣಕ್ಕಾಗಿ ಜಾತಿ ಪ್ರಕರಗಳು ಕಾಣುತ್ತಿವೆ. ಆರೋಗ್ಯಪೂರ್ಣ ಸಾಮಾಜಿಕ ಜೀವನ ನೆಲೆಗೊಳ್ಳುತ್ತದೆ ಎನ್ನುವ ನಂಬಿಕೆಯಿಟ್ಟುಕೊಂಡು ಜೀವಿಸಬೇಕಾಗಿದೆ.

ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಸಮಸ್ಯೆಗಳು ಹಾಗೂ ಅನಿವಾರ್ಯ ಸಂಬಂಧಗಳನ್ನು ಗ್ರಹಿಸುವ ನೆಲೆಗಳನ್ನಿಟ್ಟುಕೊಂಡು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಬೋಧಿವೃಕ್ಷದ ಕೆಳಗೆ ಪುಸ್ತಕವನ್ನು ಹೊರತಂದಿದ್ದಾರೆಂದು ಗುಣಗಾನ ಮಾಡಿದರು.

ನಿವೃತ್ತ ಪ್ರಾಧ್ಯಾಪಕ ಮತ್ತು ಲೇಖಕ ಪ್ರೊ.ಹೆಚ್.ಲಿಂಗಪ್ಪ ಮಾತನಾಡುತ್ತ ಅರ್ಥಶಾಸ್ತ್ರಕ್ಕೆ ಜೀವ ಕೊಡುವ ಕೆಲಸವನ್ನು ಕಳೆದ ಎರಡುವರೆ ದಶಕಗಳಿಂದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಸಾಮಾನ್ಯ ಜನರು ಬೋಧಿವೃಕ್ಷದ ಕೆಳಗೆ ಪುಸ್ತಕವನ್ನು ಓದಿದರೆ 25 ವರ್ಷಗಳ ಹಿಂದೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಳಮಟ್ಟದಲ್ಲಿತ್ತೆ ಎನ್ನುವುದು ಗೊತ್ತಾಗುತ್ತದೆ. ಅರ್ಥಶಾಸ್ತ್ರ, ವಿಜ್ಞಾನ, ಪುನರ್‍ಅವಲೋಕನ, ನ್ಯೂಟನ್ ನಿಯಮ ಈ ಪುಸ್ತಕದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಮತ್ತು ಚಿಂತಕ ಹೊಳಲ್ಕೆರೆಯ ಪ್ರೊ.ಚಂದ್ರಶೇಖರ ತಾಳ್ಯ ಮಾತನಾಡಿ ಈಗಿನ ಅರ್ಥಶಾಸ್ತ್ರ ಬಂಡವಾಳ ಕೇಂದ್ರಿತವಾಗಿದೆ. ಆಧ್ಯಾತ್ಮಿಕ ಕೇಂದ್ರೀಕೃತವಾಗಿಲ್ಲ. ಅರ್ಥಶಾಸ್ತ್ರ ಹೇಗಿರಬೇಕೆಂದು ಹನ್ನೆರಡನೆ ಶತಮಾನದಲ್ಲಿಯೇ ಬಸವಣ್ಣ ಒಳನೋಟಿ ಕೊಟ್ಟಿದ್ದಾರೆ. ಬಂಡವಾಳಶಾಹಿಗಳಿಂದ ಆಧ್ಯಾತ್ಮಿಕವಾಗಿ ಪಲ್ಲಟಗೊಂಡರೆ ಅಸ್ತಿತ್ವ ಉಳಿಸಿಕೊಳ್ಳಬಹುದು ಎಂದು ಹೇಳಿದರು.

ಕಲುಷಿತ ಮನಸ್ಸನ್ನು ಮೊದಲು ಸ್ವಚ್ಚಗೊಳಿಸಿಕೊಳ್ಳಬೇಕು. ಪ್ರೊ.ರಾಘವೇಂದ್ರ ಪಾಟೀಲ್‍ರವರ ಒಳ್ಳೆಯ ಮುನ್ನುಡಿ ಈ ಪುಸ್ತಕದಲ್ಲಿದೆ. ಆರ್ಥಿಕ, ರಾಜಕೀಯ, ಧಾರ್ಮಿಕ ರಂಗ ಹೊಲಸೆದ್ದು ಹೋಗಿದೆ ಎಂದು ವಿಷಾಧಿಸಿದರು.

ನಿವೃತ್ತ ಪ್ರಾಂಶುಪಾಲರು ಮತ್ತು ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮಾತನಾಡುತ್ತ ಆರ್ಥಿಕ ಚಿಂತಕರಾಗಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರು ನಮ್ಮ ನಡುವೆ ಇರುವುದೇ ಒಂದು ಸಂತೋಷ. ಸಾಹಿತ್ಯಕವಾದ ನೈಪುಣ್ಯತೆ ನಂಟು ಬೋಧಿವೃಕ್ಷದ ಕೆಳಗೆ ಪುಸ್ತಕದಲ್ಲಿದೆ. ನಾಣ್ಣುಡಿ, ಗಾಧೆಗಳು, ಸಾಹಿತ್ಯಿಕ, ಸಾಂಸ್ಕøತಿಕ, ಸಾಮಾಜಿಕ ಅಂಶಗಳನ್ನು ಒಳಗೊಂಡ ಪರಿಷ್ಕøತ ಆವೃತ್ತಿಯನ್ನು ಹೊರತಂದಿದ್ದಾರೆ. ಸ್ವಂತಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹುಳು ಬಿದ್ದಿದೆ. ಅವರ ಚಿಂತನೆ ಬಹುಜನ ಆರ್ಥಿಕತೆ ಬಗ್ಗೆ ಇರುತ್ತದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅವರದು ಸಾಹಿತ್ಯ ಕೃತಿಗಳಲ್ಲಿ ಶ್ರೇಷ್ಠವಾದ ಕೆಲಸ. ಸಮಾಜ ಪರಿವರ್ತನೆಗೆ ಬೇಕಾದ ಅಂಶಗಳು ಪುಸ್ತಕದಲ್ಲಿವೆ. ಶಿವನ ಕಾಲದ ಗಿಡ-ಮರಗಳಲ್ಲಿ ಬೋಧಿವೃಕ್ಷ ಅತ್ಯಂತ ಪ್ರಧಾನವಾದುದು. ಸಾಹಿತ್ಯ, ನಾಟಕ ವಲಯಕ್ಕೆ ಡಾ.ಜಿ.ಎನ್.ರವರ ಕೊಡುಗೆ ಅಪಾರ. ಚಿತ್ರದುರ್ಗ ಜಿಲ್ಲೆ ಆರ್ಥಿಕವಾಗಿ ಬಡವಾಗಿರಬಹುದು. ಆದರೆ ಸಾಹಿತ್ಯಿಕವಾಗಿ ಅತ್ಯಂತ ಶ್ರೀಮಂತವಾಗಿದೆ ಎಂದು ತಿಳಿಸಿದರು.

ಕೃತಿಕಾರ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡುತ್ತ ಒಳ್ಳೆ ಕೃತಿ ಮಾತುಗಳನ್ನು ರೂಢಿಸಿಕೊಂಡರೆ ವೈಯಕ್ತಿಕವಾಗಿ ಆರೋಗ್ಯವಂತರಾಗಿರಬಹುದು. ಗೌತಮ ಬುದ್ದ, ಬಸವಾದಿ ಶರಣರುಗಳು ಕೂಡ ಇದನ್ನೆ ಹೇಳಿದ್ದಾರೆ. ಜಾಗತೀಕರಣ, ಸಹಕಾರಿ ಚಟುವಟಿಕೆ, ಮಾನವೀಯ ನೆಲೆಗಳ ಮೇಲೆ ಬೋಧಿವೃಕ್ಷದ ಕೆಳಗೆ ಪುಸ್ತಕವನ್ನು ಬರೆದಿದ್ದೇನೆ. ಅಭಿವೃದ್ದಿಗೆ ಬೇಕಾದ ಮಾಹಿತಿಗಳು ಸಿಗಲಾರದ ಸಂದರ್ಭದಲ್ಲಿದ್ದೇವೆ. 75 ವರ್ಷಗಳಲ್ಲಿ ವಿವಿಧ ಆಯಾಮಗಳಲ್ಲಿ ಆಗಿರುವ ಅಭಿವೃದ್ದಿ ಕುರಿತು ಒತ್ತು ನೀಡಲಾಗಿದೆ. ನೇರವಾಗಿ ವಿಮರ್ಶೆ ಮಾಡುವವರು ಕಮ್ಮಿ. ವಾಸ್ತವಿಕತೆಯನ್ನು ಮರೆತಂತ ಕಲ್ಪನಾ ಲೋಕದಲ್ಲಿದ್ದೇವೆ. ತಾತ್ವಿಕ, ತಾಂತ್ರಿಕ ನೆಲೆಯಲ್ಲಿ ದಿಕ್ಸೂಚಿಯಾದ ಲೇಖನ ಬರವಣಿಗೆಗೆ ಪ್ರೇರಣೆಯಾಯಿತು ಎಂದು ನೆನಪಿಸಿಕೊಂಡರು.

ನಿವೃತ್ತ ಪ್ರಾಂಶುಪಾಲರಾದ ಕೃಷ್ಣಮೂರ್ತಿ, ಕವಿ ರಾಜೇಂದ್ರ ಪ್ರಸಾದ್ ಇವರುಗಳು ಪುಸ್ತಕ ಕುರಿತು ಮಾತನಾಡಿದರು.
ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪನವರು ಭಾವಗೀತೆಯೊಂದಿಗೆ ಪ್ರಾರ್ಥಿಸಿದರು.

ಉಪನ್ಯಾಸಕ ಹಾಗೂ ಕೃತಿ ಪ್ರಕಾಶಕ ಡಾ.ಓಬಳೇಶ್ ಸ್ವಾಗತಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ.ಚನ್ನಬಸಪ್ಪ ನಿರೂಪಿಸಿ ವಂದಿಸಿದರು.
ಡಾ.ಲೋಕೇಶ್ ಅಗಸನಕಟ್ಟೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಸಿ.ಬಿ.ಶೈಲ, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವಕುಮಾರ ಪೋತೆ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪನವರ ಅಪಾರ ಅಭಿಮಾನಿಗಳು ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಆ ಐವರು ಕಾರಣವೇ ?

ಸುದ್ದಿಒನ್ | ಮಹಾರಾಷ್ಟ್ರ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಭಾರೀ ಸೋಲಿನ ನಂತರ ಪಕ್ಷವು ಇವಿಎಂಗಳಿಂದ ನಮಗೆ ಸೋಲಾಗಿದೆ ಎಂದು ದೂರಿದೆ. ಇವಿಎಂಗಳ ದತ್ತಾಂಶದಿಂದಾಗಿ ಚುನಾವಣೆ

RCB ಸೇರ್ತಾರೆ ಅಂದುಕೊಂಡ್ರೆ ಕನ್ನಡಿಗ ರಾಹುಲ್ ಡೆಲ್ಲಿ ಪಾಲು..!

RCB ಕ್ರೇಜ್ ಎಷ್ಟಿದೆ‌ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಐಪಿಎಲ್ ಶುರುವಾಗುವ ಮುನ್ನವೇ ಆರ್ಸಿಬಿ ಫೀವರ್ ಅಭಿಮಾನಿಗಳಲ್ಲಿ ಜೋರಾಗಿ ಬಿಡುತ್ತದೆ. ಆರ್ಸಿಬಿ ಅಂದ್ರೆ ಅಷ್ಟು ಪ್ರೀತಿ ಕನ್ನಡಿಗರಿಗೆ. ಈಗ ಆರ್ಸಿಬಿ ಫ್ಯಾನ್ಸ್ ಖುಷಿ ಪಡೋ

error: Content is protected !!