ಚಿತ್ರದುರ್ಗ, (ಫೆ.05) ಹೊಸದುರ್ಗ ತಾಲ್ಲೂಕಿನ ಕುಂದೂರು ಗೊಲ್ಲರಹಟ್ಟಿಯಲ್ಲಿ ಭಾನುವಾರ ಸಂಜೆ ಅಂಭಾದೇವಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಭಾರತ್ ಹುಣ್ಣಿಮೆ ದಿನದಂದು ಅಂಭಾದೇವಿ ಜಾತ್ರೆಯ ಅಂಗವಾಗಿ ಬೆಳಿಗ್ಗೆ ತಿಮ್ಮಪ್ಪ ಸ್ವಾಮೀಜಿಯ ಗೋವರ್ಧನಗಿರಿ ಸಿಂಹಾಸನ ಪೀಠಾರೋಹಣ ನೆರವೇರಿಸಲಾಯಿತು.
ಸಂತಾನಕ್ಕಾಗಿ ಹೊತ್ತ ಭಕ್ತರು ಮಕ್ಕಳ ಮುಡಿತೆಗೆಸಿ , ದೇವಿಯ ದರ್ಶನ ಪಡೆದರು.
ಜಾತ್ರಾ ಅಂಗವಾಗಿ ಅಂಭಾದೇವಿ ಮತ್ತು ತಿಮ್ಮಪ್ಪನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಪಲ್ಲಕ್ಕಿಯನ್ನು ಎರಡು ದೇವರುಗಳನ್ನು ಪ್ರತಿಷ್ಠಾಪಿಸಿ ದೇವಸ್ಥಾನ ಮೂರು ಸುತ್ತು ಪ್ರದಕ್ಷಿಣೆ ಮಾಡಿಕೊಂಡು ರಥೋತ್ಸವದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿದ ನಂತರ ಬ್ರಹ್ಮರಥೋತ್ಸವ ಚಾಲನೆ ನೀಡಲಾಯಿತು. ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಎಲ್ಲ ಸಮುದಾಯಗಳು ಭಕ್ತರು ಆಗಮಿಸಿದ್ದರು. ಭಕ್ತರಿಗಾಗಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.