ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.23): ಪ್ರಾದೇಶಿಕ ಸಾರಿಗೆ ಇಲಾಖೆ ಹೊಸದಾಗಿ ಆಟೋಗಳಿಗೆ ಪರ್ಮಿಟ್ ನೀಡಬಾರದು ಎನ್ನುವುದು ಸೇರಿದಂತೆ ಎಂಟು ಬೇಡಿಕೆಗಳನ್ನು ಈಡೇರಿಸುವಂತೆ ನವಭಾರತ ಹಿಂದು ದಲಿತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗದಲ್ಲಿ ಪರ್ಮಿಟ್ ಇಲ್ಲದಿರುವ ಆಟೋಗಳಿಗೆ ಅವಕಾಶ ನೀಡಬಾರದು. ಮಿನಿಮಮ್ ಚಾರ್ಜ್ ಒಂದು ಕಿ.ಮೀ.ಗೆ ಇಪ್ಪತ್ತು ರೂ. ಹೆಚ್ಚಿಸಬೇಕು.
ಚಾಲಕರು ಗುರುತಿಸುವ ಜಾಗದಲ್ಲಿ ಆಟೋ ನಿಲ್ದಾಣಗಳನ್ನು ನಿರ್ಮಿಸಬೇಕು.
ಆಟೋ ಚಾಲಕರುಗಳಿಗಾಗಿಯೇ ನಿಗಮ ಮಂಡಳಿ ರಚನೆಯಾಗಬೇಕು.
ಹಳ್ಳಿಗಳಿಗೆ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ಅಪೆ ಆಟೋಗಳ ಸಂಚಾರವನ್ನು ನಿಲ್ಲಿಸಬೇಕು.
ರಾಜ್ಯ ಸರ್ಕಾರದಿಂದ ಮಂಜೂರಾಗುವ ಆಶ್ರಯ ಮನೆಗಳಲ್ಲಿ ಬಡ ಆಟೋ ಚಾಲಕರುಗಳಿಗೂ ಮನೆಗಳನ್ನು ನೀಡಬೇಕು.
ನಗರಸಾರಿಗೆ ಬಸ್ಗಳಿಗೆ ನಿಗಧಿತ ಸಮಯ ಮತ್ತು ಸ್ಥಳ ಕಡ್ಡಾಯವಾಗಬೇಕು.
ಈ ಎಲ್ಲಾ ಬೇಡಿಕೆಗಳನ್ನು ಮೂವತ್ತು ದಿನಗಳೊಳಗಾಗಿ ಈಡೇರಿಸದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಆಟೋ ಘಟಕದ ಜಿಲ್ಲಾಧ್ಯಕ್ಷ ಸೆಂದಿಲ್ ಕುಮಾರ್ ಎಸ್. ಜಿಲ್ಲಾಧ್ಯಕ್ಷ ಹರೀಶ್ ಟಿ.ಎನ್. ಸೇರಿದಂತೆ ನೂರಾರು ಆಟೋ ಚಾಲಕರುಗಳು ಹಾಗೂ ಮಾಲೀಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.