ಬೆಂಗಳೂರು: ಪಿಎಸ್ಐ ಹಗರಣ ಸೇರಿದಂತೆ ಪ್ರಧಾನಿ ಮೋದಿಗೆ,ಮಾಜಿ ಸಿಎಂ ಸಿದ್ದರಾಮಯ್ಯ ಅವರು 12 ಪ್ರಶ್ನೆಗಳನ್ನು ಕೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಫೋಟೋ ಹಂಚುವ ಮೂಲಕ ನ್ಯಾಯಬೇಕು ಮೋದಿ ಎಂಬ ಹ್ಯಾಸ್ ಟ್ಯಾಗ್ ಬಳಸಿದ್ದಾರೆ. ಈ ಹಿಂದೆಯೂ ಪ್ರಧಾನಿ ಮೋದಿ ಅವರಿಗೆ ಹಲವು ಪ್ರಕಾರ ಪ್ರಶ್ನೆಗಳನ್ನು ಕೇಳಿದ್ದರು.
* ಪಿಎಸ್ಐ ನೇಮಕಾತಿ ಹಗರಣದಿಂದ, ಸಹಾಯಕ ಪ್ರಾಧ್ಯಾಪಕರ ಹಗರಣ, PWD ಸಹಾಯಕ ಎಂಜಿನಯರ್ ನೇಮಕಾತಿ ಹಗರಣದಲ್ಲಿ ಕೆಲಸದಿಂದ ವಂಚಿತರಾದ ಎಲ್ಲರಿಗೂ ನ್ಯಾಯ ಕೊಡಿಸಿ ಮೋದಿಯವರೆ..!
* ಕೆ ಆರ್ ಪುರಂನ ಇನ್ಸ್ಪೆಕ್ಟರ್ ನಂದೀಶ್ 80 ಲಕ್ಷ ಲಂಚ ಕೊಟ್ಟು ಬರ್ಗಾವಣೆ ಪಡೆದು ಬಂದ ಕಾರಣಕ್ಕೆ ಒತ್ತಡದಿಂದ ಸತ್ತಿದ್ದಾರೆ ಎಂದು ಸ್ವತಃ ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇತರರಿಗೆ ರಕ್ಷಣೆ ನೀಡುವ ಪೊಲೀಸರೇ ಹೀಗಾದರೆ ಸಾಮಾನ್ಯರ ಗತಿ ಏನು..?
* ಕೋವಿಡ್ ಸಮಯದಲ್ಲಿ ಅಗತ್ಯ ಸಲಕರಣೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ರಾಜ್ಯ ಸರ್ಕಾರ ಬಿಲ್ ನೀಡದ ಹಿನ್ನೆಲೆ, ರಾಷ್ಟ್ರಪತಿಯವರಿಗೆ ದಯಾಮರಣಕ್ಕೆ ಅರ್ಜಿ ಹಾಕಿದ್ದರು. ಇವರಿಗೆ ನ್ಯಾಯಕೊಡಿಸಬೇಕಾದವರು ನೀವಲ್ಲವೇ ಮೋದಿ..?
* ಪರೇಶ್ ಮೇಸ್ತಾನ ಸಾವನ್ನೂ ತನ್ನ ಭರ್ಜರಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದು ಬಿಜೆಪಿ. ಈಗ ಆತನ ವಯೋವೃದ್ಧ ತಂದೆ ತಾಯಿಗೆ ನ್ಯಾಯಬೇಕು.
* ಕೊರೊನಾ ಕಾಲದಲ್ಲಿ ನಡೆದ ಮೂರು ಸಾವಿರ ಕೋಟಿ ಅವ್ಯವಹಾರ, ಶರಾವತಿ ಸಂತ್ರಸ್ಥ ಕುಟುಂಬಗಳ ಸಮಸ್ಯೆ, ನಂದಿನಿ ಸಂಸ್ಥೆ ಮೇಲೆ ಗುಜರಾತ್ ಅಮುಲ್ ಕಣ್ಣು, ಕಾಲುಬಾಯಿ ಮತ್ತು ಚರ್ಮಗಂಟು ರೋಗದಿಂದ ರಾಸುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ, 40% ಕಮಿಷನ್ ಹೀಗೆ ಹನ್ನೆರಡು ವಿಚಾರಗಳ ಮೇಲೆ ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.