ಚತ್ರದುರ್ಗ, (ಜ.12) : ಮಕ್ಕಳಲ್ಲಿ ಸಂಸ್ಕಾರಯುತ ಗುಣವನ್ನು ಬಾಲ್ಯದಲ್ಲಿಯೇ ಬೆಳೆಸಿದರೆ ಮುಂದೆ ಭಾರತದ ಉಜ್ವಲ ಪ್ರಜೆಯಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ ಜಿ.ಎಸ್. ಅನಿತ್ ಕುಮಾರ್ ಹೇಳಿದರು.
ತಾಲ್ಲೂಕಿನ ಭೀಮಸಮುದ್ರದ ಶ್ರೀ ಭೀಮೇಶ್ವರ ಬಾಲ ವಿಕಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಮಕ್ಕಳಿಂದ ಪೋಷಕರಿಗೆ ಪಾದ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ವಾಣಿಯಾದ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು. ಅದರಂತೆ ಮಕ್ಕಳಾದ ನೀವು ಅಂದು ಕೊಂಡಿರುವ ಗುರಿಯನ್ನು ಮುಟ್ಟುವ ದಿಸೆಯಲ್ಲಿ ಪ್ರಯತ್ನಿಸಬೇಕು.ಈ ನಿಟ್ಟಿನಲ್ಲಿ ಅಸಂಖ್ಯಾತ ಪೋಷಕರು ಗಮನ ಹರಿಸಬೇಕು.
ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಸಮಗ್ರ ಶಿಕ್ಷಣ ನೀತಿ ಜಾರಿಗೆ ತಂದಿದ್ದು ಅದರ ಮುಖ್ಯ ಉದ್ದೇಶ ಮಕ್ಕಳಿಗೆ ಯಾವ ವಿಭಾಗದಲ್ಲಿ ಆಸಕ್ತಿ ಹೊಂದಿರುತ್ತಾರೋ ಆ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ನರೇಂದ್ರ ಮೋದಿಜಿಯವರು ಯಶಸ್ವಿಯಾಗಿದ್ದಾರೆ.
ನಮ್ಮ ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, ಅವರಿಗೆ ಒಂದಲ್ಲ ಒಂದು ಕೆಲಸವಿದ್ದೇ ಇದೆ ಜವಾನ ನಿಂದ ದಿವಾನದವರೆಗೂ ಕೆಲಸಗಳು ಇವೆ ಅವರ ಓದಿಗೆ ತಕ್ಕಂತೆ ಉದ್ಯೋಗವಕಾಶಗಳು ಇದ್ದು, ಮಕ್ಕಳ ಆಸೆಯನ್ನು ಗಮನಿಸಿ ಪೋಷಕರು ಆ ದಿಸೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಬೇಕೆಂದು ತಿಳಿಸಿದರು.
ಭಾರತದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ತಮ್ಮ ತಾಯಿಯನ್ನು ಪೂಜೆ ಮಾಡಿದ್ದನ್ನು ತಾವುಗಳು ದೂರದರ್ಶನದಲ್ಲಿ ಗಮನಿಸಿರಬಹುದು. ದೇಶದ ದೊರೆಯಾದರೂ ತಾಯಿಗೆ ಮಗನೇ ಎಂಬ ನಾಣ್ಣುಡಿಯಂತೆ ತಾಯಿಯ ಪಾದ ಪೂಜೆ ಮಾಡಿದರ ಫಲವಾಗಿ ಇಡೀ ವಿಶ್ವವೇ ನೋಡುವಂತಹ ಒಬ್ಬ ವ್ಯಕ್ತಿಯಾದರು
ನಮ್ಮ ದೇಶದ ಆಗರ್ಭ ಶ್ರೀ ರಾಕೇಶ ಜುಂಜರ್ ವಾಲ ರವರು ಷೇರು ಮಾರುಕಟ್ಟೆಯ ಪ್ರವೀಣರಾಗಿದ್ದು, ಅದರಿಂದ ಅಪಾರ ಹಣವನ್ನು ಗಳಿಕೆ ಮಾಡಿದ್ದರು, ಆದರೆ ಅವರ ಆರೋಗ್ಯದ ಕಡೆ ನಿರ್ಲಕ್ಯವನ್ನು ತೋರಿದರು ಅದರ ಪರಿಣಾಮವಾಗಿ ಕೇವಲ 40 ವರ್ಷಕ್ಕೆ ಅನಾರೋಗ್ಯಕ್ಕೆ ತುತ್ತಾಗಿ ಕಳೆದ ವರ್ಷ ಅಸುನೀಗಿದರು ಸಾಯುವ ಮುನ್ನ ಅವರು ಹೇಳಿದಿಷ್ಟೇ ನನ್ನ ಹಾಗೆ ತಾವುಗಳು ದುಡಿಮೆಯ ಕಡೆ ಗಮನಹರಿಸದೆ ಆರೋಗ್ಯದ ಕಡೆ ಗಮನ ನೀಡಿ ಎಂದು ಅಸು ನೀಗಿದರು ಹಾಗಾಗಿ ಮಕ್ಕಳು ಹಣ ಮತ್ತು ಅಂಕಗಳಿಕೆಯಲ್ಲಿ ಇರುವಷ್ಟೇ ಗಮನ ಆರೋಗ್ಯ ದ ಕಡೆಯೂ ಇರಬೇಕು.
ಮಕ್ಕಳನ್ನು ಚೆನ್ನಾಗಿ ಬೆಳಸಿ ವಿದ್ಯಾವಂತರಾಗಿ ಮಾಡುವುದು ತಂದೆ ತಾಯಿಗಳ ಕರ್ತವ್ಯವಾಗಿದ್ದು, ಈ ದಿನ ಜನ್ಮ ನೀಡಿದ ತಂದೆ ತಾಯಿಗಳಿಗೆ ಪಾದಪೂಜಾ ಕಾರ್ಯಕ್ರಮವನ್ನು ಕಂಡು ತುಂಬಾ ಆನಂದವಾಯಿತು ಎಂದರು.
ಭಾರತೀಯರು ಸಂಸ್ಕೃತಿಯನ್ನು ಮರೆಯುವಂತಹ ಕಾಲದಲ್ಲಿ ಇಂತಹ ಕಾರ್ಯಕ್ರಮ ತುಂಬ ಅವಶ್ಯಕವಾಗಿದ್ದು, ಮಕ್ಕಳು ತಮ್ಮ ತಂದೆ ತಾಯಿಗಳ ಮಹತ್ವವನ್ನು ಅರಿಯುವರೆಂದೂ ನಮ್ಮ ಕೈಗಳಲ್ಲಿ ಕಾಂತೀಯ ಶಕ್ತಿ ಇದ್ದು ಪಾದವನ್ನು ಮುಟ್ಟಿ ಪೂಜೆಯನ್ನು ಮಾಡಿದಾಗ ಕಾಂತೀಯ ಶಕ್ತಿಯು ದೇಹದಾದ್ಯಂತ ಪಸರಿಸುವುದೆಂದರು.
ಅದೇ ರೀತಿಯಾಗಿ ಮಕ್ಕಳಿಗೆ ಮೊಬೈಲ್ ನೀಡದೆ ಪುಸ್ತಕಗಳನ್ನು ನೀಡಿ ಆಟ ಪಾಠಗಳಲ್ಲಿ ಒತ್ತು ನೀಡಿದರೆ ಅವರಿಗೆ ಉತ್ತೇಜನ ನೀಡಿದಂತಾಗುವುದು ಎಂದು ತಿಳಿಸಿದರು.
ಪಾದಪೂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟ ಆಧ್ಯಾತ್ಮಕ ಚಿಂತಕರಾದ ವೇದ ಬ್ರಹ್ಮ ಶ್ರೀ ಶಿವಬಸವ ಸ್ವಾಮಿ ಯವರು ಮಾತನಾಡಿ ಭಾರತವು ಉಜ್ವಲ ಸಂಸ್ಕøತಿಯುಳ್ಳ ದೇಶವಾಗಿದ್ದು, ನಮ್ಮ ಸಂಸ್ಸøತಿಯ ಸಾರವನ್ನು ಪ್ರಪಂಚಕ್ಕೆ ಸಾರಿದ ಕೀರ್ತಿ ಸ್ವಾಮಿ ವಿವೇಕಾನಂದರವರದ್ದು, ಅವರ ಆದರ್ಶದಂತೆ ಭಾರತವು ಸಾಗಿದರೆ ಮುಂದೊಂದು ದಿನ ಪ್ರಪಂಚದ ಮುಂಚೂಣಿ ದೇಶವಾಗುವುದರಲ್ಲಿ ಸಂಶಯವಿಲ್ಲ ಈ ಶಾಲೆಯಲ್ಲಿ ವಿಶೇಷವಾದ ಕಾರ್ಯಕ್ರಮವು ಇದಾಗಿದ್ದು ವಿಶ್ವವೇ ನೋಡುವಂತಹ ಆಧ್ಯಾತ್ಮ ಸಂಪತ್ತು ಭಾರತದಲ್ಲಿದ್ದು ಅದರಂತೆ ನಡೆದಾಡುವ ದೇವರು ಎಂದರೆ ನಮ್ಮ ತಂದೆ ತಾಯಿಗಳಾಗಿದ್ದು, ಅವರನ್ನು ಪೂಜಿಸಿದರೆ ಇಡೀ ದೇವರುಗಳ ಸಮೂಹವನ್ನೇ ಪೂಜಿಸಿದಂತೆ ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿಯವರಾದ ತಿಪ್ಪೇಸ್ವಾಮಿ ಶ್ರೇಷ್ಠಿ ಮಾತನಾಡುತ್ತಾ ಮಕ್ಕಳಿಗೆ ತಾಯಿಯು ಪ್ರಥಮ ಗುರುವು
ಮನೆಯ ಮೊದಲ ಶಾಲೆಯಾಗಿದ್ದು, ಮಕ್ಕಳಲ್ಲಿ ಸಂಸ್ಕಾರ ಗುಣವನ್ನು ಬೆಳೆಸುವ ಕಾರ್ಯವನ್ನು ತಾಯಿಯು ಮಾಡಬೇಕೆಂದು ಹಲವಾರು ಮಹನೀಯರು ಹೆಸರುವಾಸಿಯಾಗಿದ್ದಾರೆಂದರೆ ಅವರ ಬೆನ್ನ ಹಿಂದೆ ಅವರ ತಾಯಿಯಾಗಿದ್ದು ಜೀಜಾಬಾಯಿಯವರಿಂದ ಸ್ಪೂರ್ತಿಯನ್ನು ಪಡೆದು ಶಿವಾಜಿಯವರು ರಾಜ್ಯಗಳನ್ನು ಗೆದ್ದರು ಗಾಂದೀಜಿಯವರು ಅವರ ತಾಯಿಯಿಂದ ಸ್ಪೂರ್ತಿಯನ್ನು ಪಡೆದು ಮಹಾನ್ ವ್ಯಕ್ತಿಯಾದರೆಂದೂ ಈಗೆ ಹಲವಾರು ಮಹನೀಯರ ಜೀವನದ ಸ್ಪೂರ್ತಿ ಅವರ ತಾಯಿಯವರಾಗಿರುತ್ತಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಹೆಚ್ ನಾಗರಾಜ್ ಸ್ವಾಗತಿಸಿರು, ಎಂ.,ಎನ್.ರಾಮು ನಿರೂಪಿಸಿರು ಶ್ರೀಮತಿ ಸುಂದ್ರಮ್ಮನವರು ಪ್ರಾರ್ಥಿಸಿದರು ಎನ್.ಟಿ. ಸುಬ್ರಮಣ್ಯಂ ವಂದಿಸಿದರು ಪೋಷಕರು, ಮಕ್ಕಳು ಶಿಕ್ಷಕ ಶಿಕ್ಷಕಿಯರು ಭೀಮಸಮುದ್ರ ಮತ್ತು ತುರೆಬೈಲು ಗ್ರಾಮಸ್ಥರು ಉಪಸ್ಥಿತರಿದ್ದರು.