ನವದೆಹಲಿ: ಜೀವ ಬೆದರಿಕೆ ಇದೆ ಎಂದು ಮಾಜಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಗನ್ ಲೈಸೆನ್ಸ್ ಪಡೆದಿದ್ದಾರೆ. ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿ, ಬಿಜೆಪಿಯಿಂದ ಅಮಾನತುಗೊಂಡಿದ್ದರು. ಇದೀಗ ಜೀವ ಬೆದರಿಕೆ ಇದೆ ಎನ್ನುತ್ತಿದ್ದಾರೆ.
ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ನೂಪರ್ ಶರ್ಮಾ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು. ಮುಸ್ಲಿಂ ಸಮುದಾಯದವರನ್ನು ಕೆರಳಿಸಿತ್ತು. ಮುಸ್ಲಿಂ ಸಮುದಾಯದ ಕೋಪಕ್ಕೆ ನೂಪುರ್ ಶರ್ಮಾ ಗುರಿಯಾಗಿದ್ದರು. ಮುಸ್ಲಿಂ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ಹೀಗಾಗಿ ಬಿಜೆಪಿ ಪಕ್ಷ ನೂಪುರ್ ಶರ್ಮಾ ಅವರನ್ನು ತಮ್ಮ ಪಕ್ಷದಿಂದ ಅಮಾನತು ಮಾಡಿತ್ತು.
ಇದಾದ ಬಳಿಕ ನೂಪುರ್ ಶರ್ಮಾ, ತನಗೆ ಜೀವ ಬೆದರಿಕೆ ಇದೆ, ಗನ್ ಲೈಸೆನ್ಸ್ ಬೇಕೆಂದು ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದರು. ಜೀವ ರಕ್ಷಣೆಗಾಗಿ ನೂಪುರ್ ಶರ್ಮಾ ಮಾಡಿದ್ದ ಮನವಿಯನ್ನು ಪೊಲೀಸರು ಪುರಸ್ಕರಿಸಿದ್ದು, ಗನ್ ಲೈಸೆನ್ಸ್ ನೀಡಿದ್ದಾರೆ.