ಬೆಂಗಳೂರು: ಪಂಚಮಸಾಲಿ ಮತ್ತು ಲಿಂಗಾಯತ ಸಮುದಾಯಗಳ ಮೀಸಲಾತಿ ವಿಚಾರ ಅಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಚುನಾವಣೆ ಹತ್ತಿರವಿರುವಾಗಲೇ ಮೀಸಲಾತಿಯ ಕೂಗು ಜೋರಾಗಿ ಕೇಳಿ ಬರುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸನಯದ ಟಾರ್ಗೆಟ್ ಅನ್ನು ನೀಡಲಾಗಿತ್ತು. ಆದರೆ ಇದೀಗ ಇದೆಲ್ಲದಕ್ಕೂ ಹೈಕೋರ್ಟ್ ತಡೆ ನೀಡಿದೆ.
ಒಕ್ಕಲಿಗ ಸಮುದಾಯದವರೆಲ್ಲಾ ಸಿಎಂ ಬೊಮ್ಮಾಯಿ ಬಳಿ ಮೀಸಲಾರಿಗಾಗಿ ಮನವಿ ಇಟ್ಟಿದ್ದರು. ಪಕ್ಷ ಬೇರೆ ಬೇರೆಯಾದರೂ, ಸಮುದಾಯದ ಮೀಸಲಾತಿಗಾಗಿ ಸಚಿವ ಸುಧಾಕರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಒಂದೇ ವೇದಿಕೆ ಹಂಚಿಕೊಳ್ಳುತ್ತಾ ಇದ್ದರು. ಇದರ ನಡುವೆ ಸಿಎಂ ಬೊಮ್ಮಾಯಿ ಅವರು ಕೂಡ ಸಂಪುಟದಲ್ಲಿ 3A ಕ್ಯಾಟಗರಿಯಲ್ಲಿದ್ದ ಒಕ್ಕಲಿಗರಿಗೆ, 2C ಅಡಿಯಲ್ಲಿ ಮೀಸಲಾತಿ ನೀಡಲು ಸಮ್ಮತಿ ಸೂಚಿಸಿತ್ತು. ಇದು ಚುನಾವಣೆಗೆ ಪ್ಲಸ್ ಪಾಯಿಂಟ್ ಆಗುವುದರಲ್ಲಿತ್ತು. ಆದರೆ ಇದೀಗ ಹೈಕೋರ್ಟ್ ನಿಂದ ತಡೆ ಸಿಕ್ಕಿದೆ.
ರಾಜ್ಯ ಸರ್ಕಾರದ ಮೀಸಲಾತಿ ಪರಿಷ್ಕೃತ ನಿರ್ಧಾರವನ್ನು ಪ್ರಶ್ನಿಸಿ, ರಾಘವೇಂದ್ರ ಡಿಜಿ ಎಂಬುವವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿರುವ ಹೈಕೋರ್ಟ್, ಅಂತಿಮ ತೀರ್ಪು ನೀಡುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿದೆ.