ಬೆಂಗಳೂರು: ನಿನ್ನೆ ಮಲ್ಲತ್ತಹಳ್ಳಿ ಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ.ಮನೆಗಳಿಗೆ, ಸೇತುವೆಗಳಿಗೆ ನೀರು ನುಗ್ಗಿದೆ, ರಸ್ತೆಗಳ ಮೇಲೆ ನೀರು ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಹೇಳಿದರು. ಈ ವೇಳೆ ಮಾತನಾಡಿದ ಅವರು, ಮಳೆಯ ಪ್ರಮಾಣ ಅರ್ಥವಾಗಿದೆ ನಮಗೆ
ವಲಯ ಅಧಿಕಾರಿಗಳಿಗೆ,ಬಿಬಿಎಂಪಿ ಆಯುಕ್ತರು ಸೂಚನೆ ಕೊಟ್ಟಿದ್ದಾರೆ ಎಂದರು.
ಮಳೆ ಪರಿಹಾರ ಕ್ರಮಗಳನ್ನು ನಾನೇ ಖುದ್ದಾಗಿ ಗಮನಿಸ್ತಿದ್ದೇನೆ.ನಿನ್ನೆಯಿಂದ ಆಯುಕ್ತರ ಜತೆ ಸಂಪರ್ಕದಲ್ಲಿದ್ದೇನೆ
ಮನೆಗಳಿಗೆ ನೀರು ನುಗ್ಗಿದ್ದು, ಅದರತ್ತ ನಮ್ಮ ಆಧ್ಯತೆ ಕೊಡಲಾಗಿದೆ.
ಹಣಕಾಸಿನ ನೆರವನ್ನು ಸರ್ಕಾರ ಕೊಡಲಿದೆ ಎಂದರು.
ಮಳೆಯಿಂದಾಗಿ ರಾತ್ರಿಯೇ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ಪರಿಹಾರ ಕೆಲಸಗಳನ್ನು ರಾತ್ರಿಯಿಂದಲೇ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ರಾಜಕಾಲುವೆ, ಕೆರೆ, ತಗ್ಗುಪ್ರದೇಶದ ವಸತಿ ನಿವೇಶನಗಳ ಬಗ್ಗೆ ಕ್ರಮ ಕೈಗೊಂಡು
ನಗರವನ್ನು ಸುರಕ್ಷಿತ, ಹಸುರು ನಗರ ಮಾಡಲು ಕ್ರಮಕೈಗೊಳ್ಳುತ್ತೇವೆ
ಮಳೆಯಿಂದ ವಾಹನಗಳ ಮೇಲೆ ಮರಗಿಡ ಬಿದ್ದು ಜಖಂ ಆಗಿದೆ,ಹಸುಗಳು ಕೆಲವೆಡೆ ಮೃತಪಟ್ಟಿವೆ ಹಳೆಯ ಕಟ್ಟಡಗಳು ಹಾನಿಗೊಂಡಿವೆ. ಇವೆಲ್ಲದರ ಬಗ್ಗೆ ತಡಮಾಡದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.