ಬೆಂಗಳೂರು: ಕಾನೂನು ಬಲ್ಲವರು ನಮ್ಮ ಮುಖ್ಯಮಂತ್ರಿಗಳು, ಮೇಕೆದಾಟು ಡ್ಯಾಂ ಗೆ ಅಡ್ಡಿ ಪಡಿಸಲು ತಮಿಳುನಾಡಿಗೆ ಹಕ್ಕಿಲ್ಲ ಅಂತ ಹೇಳಿದ್ದಾರೆ ಬಹಳ ಸಂತೋಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣ ವಿಚಾರ ಮಹದಾಯಿ ವಿಚಾರ ಕಾನೂನಿನಲ್ಲಿ ಅವಕಾಶ ಇಲ್ಲ ಅಂದ್ರೂ ಕೂಡ ಅವರು ಅಡ್ಡಿಪಡಿಸುತ್ತಿದ್ದಾರೆ.
ಒಂದು ತಿಂಗಳ ಒಳಗೆ ಅಡಿಪಾಯ ಹಾಕ್ಬೇಕು. ತಮಿಳುನಾಡಿಗೆ ಹಕ್ಕಿಲ್ಲ ಅಂತ ಹೇಳಿದ್ದೀರಾ.? ನಿಮಗೆ ಕಮಿಟ್ಮೆಟ್ ಇಲ್ಲ, ಬದ್ಧತೆ ಇಲ್ಲ..
ಒಂದು ತಿಂಗಳ ಟೈಮ್ ಕೊಟ್ಟಿದ್ದೀವಿ, ಅವರು ಮಾಡ್ಲಿಲ್ಲ ಅಂದ್ರೆ ಅದನ್ನ ಈಗ ಹೇಳಲು ಆಗಲ್ಲ ಎಂದರು
ಕಾನೂನಿನಲ್ಲಿ ಕೆಲಸ ಮಾಡ್ಬೇಡಿ ಅಂತ ಯಾರು ನಿಮಗೆ ಹೇಳಿಲ್ಲ, ಡಬಲ್ ಇಂಜಿನ್ ಸರ್ಕಾರ ಇದೆ ಆದ್ರೆ ಯಾಕೆ ಇನ್ನೂ ಕೆಲಸ ಆರಂಭಿಸಿಲ್ಲ..?
ಮುಖ್ಯಮಂತ್ರಿಗಳಿಗೆ ಒಂದು ತಿಂಗಳ ಗಡುವನ್ನ ನೀಡುತ್ತೇವೆ. ನೀರಾವರಿ ವಿಚಾರದಲ್ಲಿ ಆಗುತ್ತಿರುವ ವಿಳಂಬ, ಬೆಂಗಳೂರಿಗೆ ನೀರಿನ ವ್ಯವಸ್ಥೆ ಆಗಬೇಕು. ರೈತ ಸಂಘಟನೆಗಳು ಪಾದಯಾತ್ರೆ ಬರುವಾಗ ಅಡ್ಡ ದಾರಿಯಲ್ಲಿಯೇ ತಡೆದು ಅವರ ಧ್ವನಿಯನ್ನು ಹತ್ತಿಕ್ಕವ ಪ್ರಯತ್ನ ಮಾಡಿರುವುದು ಖಂಡನೀಯ ಎಂದರು.