ಆಫ್ಘಾನಿಸ್ತಾನ: ಸೂಸೈಡ್ ಬಾಂಬರ್ ಒಬ್ಬ ಬಾಂಬ್ ಸ್ಪೋಟಿಸಿಕೊಂಡ ಪರಿಣಾಮ ವಿಮಾನ ನಿಲ್ದಾಣದ ಬಳಿ ಹತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇನ್ನು ಹಲವರು ಗಂಭೀರ ಗಾಯಗೊಂಡಿರುವ ಘಟನೆ ಕಾಬೂಲ್ ನ ಮಿಲಿಟರಿ ಏರ್ಪೋರ್ಟ್ ಬಳಿ ನಡೆದಿದೆ.
ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ನಡೆದ ಘಟನೆಯಾಗಿದೆ. ಬಾಂಬರ್ ಬಾಂಬ್ ಸ್ಪೋಟಿಸಿಕೊಂಡ ಪರಿಣಾಮ ಹತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಬಾಂಬ್ ಸ್ಪೋಟಕ್ಕೆ ಅಕ್ಕ ಪಕ್ಕದ ಜನ ಕೂಡ ಗಾಬರಿಯಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಈಗಾಗಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.