Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಪೊಲೀಸರಿಂದ 2 ಕೋಟಿಗೂ ಅಧಿಕ ಮೌಲ್ಯದ  ಸ್ವತ್ತು ವಾರಸುದಾರರಿಗೆ ಹಸ್ತಾಂತರ…!

Facebook
Twitter
Telegram
WhatsApp

ಚಿತ್ರದುರ್ಗ, (ಡಿ.30) : ಜಿಲ್ಲೆಯಾದ್ಯಂತ (2022 ನೇ ಸಾಲಿನ) ಒಂದು ವರ್ಷದ ಅವಧಿಯಲ್ಲಿ ವಿವಿಧೆಡೆ ನಡೆದ ನಗದು, ಬಂಗಾರ ಮತ್ತು ಬೆಳ್ಳಿ ಆಭರಣಗಳಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಒಟ್ಟು 162 ಪ್ರಕರಣಗಳಲ್ಲಿ 2,06,99,995,/-ರೂಪಾಯಿಗಳ ಮೊತ್ತದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿನ್ನಾಭರಣ, ವಾಹನಗಳು ಹಾಗೂ ಇತರ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದು ಸಂಬಂಧಪಟ್ಟ ಮಾಲೀಕರಿಗೆ ಹಸ್ತಾಂತರಿಸಿದರು.

ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಪೊಲೀಸ್ ಅಧೀಕ್ಷಕರಾದ ಕೆ.ಪರಶುರಾಮ ಐ.ಪಿ.ಎಸ್ ಅವರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಸೈಬರ್ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು 162 ಪ್ರಕರಣಗಳಲ್ಲಿ ರೂ. 2,06,99,995,/ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ವಿವರ ಈ ಕೆಳಗಿನಂತಿದೆ.


ಈ ಸಂದರ್ಭದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿ ಮತ್ತು ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಉಪವಿಭಾಗದ ಉಪಾಧೀಕ್ಷಕರುಗಳಾದ ಹೆಚ್.ಆರ್ ಅನಿಲ್ ಕುಮಾರ್, ಹೆಚ್.ಬಿ ರಮೇಶ್, ಎಸ್.ರೋಷನ್ ಜಮೀರ್ ರವರ ನೇತೃತ್ವದಲ್ಲಿ ನಡೆಯಿತು.

ಎನ್‌.ಲೋಕೇಶ್ವರಪ್ಪ ಡಿವೈಎಸ್ಪಿ, ಡಿ.ಸಿ.ಆರ್.ಬಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಗಣೇಶ್ ರವರು ಮತ್ತು ಜಿಲ್ಲೆಯ ಎಲ್ಲಾ ಸಿಪಿಐ/ಪಿಐ & ಪಿಎಸ್‌ಐಗಳು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಡಿಮೆ ರಕ್ತದ ಒತ್ತಡ ಕಾರಣಗಳೇನು ? ತಡೆಗಟ್ಟುವುದು ಹೇಗೆ ?

ಸುದ್ದಿಒನ್ | ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ”

ಈ ರಾಶಿಯ ಕಾಳುಮೆಣಸು ಮತ್ತು ಏಲಕ್ಕಿ ವ್ಯಾಪಾರ ವಹಿವಾಟಗಾರರಿಗೆ ಭಾರಿ ನಷ್ಟ

ಈ ರಾಶಿಯ ಕಾಳುಮೆಣಸು ಮತ್ತು ಏಲಕ್ಕಿ ವ್ಯಾಪಾರ ವಹಿವಾಟಗಾರರಿಗೆ ಭಾರಿ ನಷ್ಟ, ಈ ರಾಶಿಯವರ ಆದಾಯ ದ್ವಿಗುಣ ನೋ ಡೌಟ್ : ಈ ರಾಶಿಯವರಿಗೆ ಉನ್ನತ ಸ್ಥಾನ ದೊರೆತು, ರಾಜಕೀಯ ಸಂಪೂರ್ಣ ಬೆಂಬಲ ಸಿಗಲಿದೆ,

ಬಾಳೆ ಬೆಲೆ ಭಾರೀ ಕುಸಿತ : ಬೆಳೆಗಾರ ಕಂಗಾಲು..!

    ರೈತ ಸಾಲ ಸೋಲ ಮಾಡಿ, ಕಷ್ಟಪಟ್ಟು ವ್ಯವಸಾಯ ಮಾಡುತ್ತಾನೆ. ಬೆಳೆದ ಬೆಲೆಗೆ ಬೆಂಬಲ ಸಿಕ್ಕರೆ ಖುಷಿಯಾಗುತ್ತಾನೆ. ಸಾಲ ತೀರಿಸಿ ಮತ್ತೆ ಭೂಮಿ ಹದ ಮಾಡುವತ್ತ ಗಮನ ಹರಿಸುತ್ತಾನೆ. ಆದರೆ ಬೆಳೆದ ಬೆಲೆಗೆ

error: Content is protected !!