ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ತುಮಕೂರಿನಲ್ಲಿ ಡಿ.28, 29 ರಂದು ನಡೆಯಲಿರುವ ರಾಜ್ಯ ಮಟ್ಟದ ಎರಡನೇ ವೈಜ್ಞಾನಿಕ ಸಮ್ಮೇಳನದಲ್ಲಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಶಿಕ್ಷಕ ಜಾದುಗಾರ ಡಾ.ವಿ.ಮೋಹನ್‍ಕುಮಾರ್ ಇವರು ಹೆಚ್.ಎನ್.ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಸಂಗಮ್ ತಿಳಿಸಿದ್ದಾರೆ.
ಚಿತ್ರದುರ್ಗ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ರಾಜ್ಯ ಮಟ್ಟದ ಎರಡನೆ ವೈಜ್ಞಾನಿಕ ಸಮ್ಮೇಳನ ಡಿ.28 ಮತ್ತು 29 ರಂದು ತುಮಕೂರಿನ ಬಿ.ಹೆಚ್.ರಸ್ತೆ(ಹೆಗ್ಗೆರೆ) ಅಗಳಕೋಟೆಯಲ್ಲಿ ನಡೆಯಲಿದೆ.
ವಿಜ್ಞಾನ, ಸಾಹಿತ್ಯ ಸಮಾಗಮದೊಂದಿಗೆ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ತಜ್ಞರು, ಸಾಹಿತಿಗಳು, ಸ್ವಾಮೀಜಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವಚನದಲ್ಲಿ ವೈಜ್ಞಾನಿಕತೆ, ಕನ್ನಡ ಭಾಷೆಯಲ್ಲಿ ವಿಜ್ಞಾನದ ಅಸ್ಮಿತೆ, ಯುವ ಮನಸ್ಸಿನ ಆತಂಕಗಳು, ಪ್ರಸ್ತುತ ಶೈಕ್ಷಣಿಕ ತಲ್ಲಣಗಳು, ರೈತರ ಪ್ರಚಲಿತ ಸಮಸ್ಯೆಗಳ ಬಗ್ಗೆ ವಿಷಯ ಮಂಡನೆ ಮತ್ತು ಚರ್ಚೆಗಳಾಗಲಿವೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿನ ಮತ್ತು 37 ಶೈಕ್ಷಣಿಕ ಜಿಲ್ಲೆಗಳಲ್ಲಿನ ಒಬ್ಬೊಬ್ಬ ಸಾಧಕರನ್ನು ಗುರುತಿಸಿ ಜಿಲ್ಲಾ ಹೆಚ್.ಎನ್.ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಚಿತ್ರದುರ್ಗ ಜಿಲ್ಲೆಯಿಂದ ಹೊಸದುರ್ಗ ತಾಲ್ಲೂಕಿನ ಶಿಕ್ಷಕ ಡಾ.ವಿ.ಮೋಹನ್‍ಕುಮಾರ್(ಪಾಟೀಲ್)ರವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯಿಂದ 40 ಜನ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಲು ಹೆಸರುಗಳನ್ನು ನೊಂದಾಯಿಸಿರುತ್ತಾರೆ. ಸಮ್ಮೇಳನದ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್‍ರವರ ನೇತೃತ್ವದಲ್ಲಿ ತುಮಕೂರು ಜಿಲ್ಲಾ ಅಧ್ಯಕ್ಷರಾದ ಡಾ.ಸಿ.ಎಸ್.ಮೋಹನ್‍ಕುಮಾರ್, ಮಧುಗಿರಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷರಾದ ಎಸ್.ರೇಣುಕ ಪ್ರಸಾದ್‍ರವರುಗಳು ಸಮ್ಮೇಳನದ ಆಥಿತ್ಯ ವಹಿಸಿಕೊಂಡಿರುತ್ತಾರೆ.
ಸಮ್ಮೇಳನಕ್ಕೆ ಬರುವ ಸದಸ್ಯರುಗಳಿಗೆ ಹಾಗೂ ಇತರರಿಗೆ ಉಪಹಾರ ಮತ್ತು ತಂಗುವ ವ್ಯವಸ್ಥೆ ಉಚಿತವಾಗಿರುತ್ತದೆ. ಎಲ್ಲಾ ಸದಸ್ಯರುಗಳು ಹಾಗೂ ಪ್ರಜ್ಞಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವಂತೆ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ನಾಗರಾಜ್ ಸಂಗಮ್, ಕಾರ್ಯದರ್ಶಿ ಪಿ.ಲೋಕೇಶ್ ಇವರುಗಳು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ: 8747825425, 9448646710, 9481743339 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.