ಬೆಂಗಳೂರು: ಕೊರೊನಾ ಅಂದ್ರೆ ಸಾಕು ಜನ ದಿಗಿಲು ಬೀಳುತ್ತಿದ್ದಾರೆ. ಲಾಕ್ಡೌನ್ ಮಾಡಿದರೆ ಜೀವನ ಸಾಗಿಸುವುದಾದರೂ ಹೇಗೆ ಎಂಬ ಆತಂಕದಲ್ಲಿದ್ದಾರೆ. ಲಾಕ್ಡೌನ್, ಸೀಲ್ಡೌನ್ ಎಂಬ ಭೂತದಿಂದ ನಷ್ಟ ಅನುಭವಿಸಿದ್ದು ಆಗಿದೆ. ಈಗ ತಾನೇ ಚೇತರಿಸಿಕೊಳ್ಳುತ್ತಿದ್ದೇವೆ. ಮತ್ತೆ ಲಾಕ್ಡೌನ್ ಆದರೆ ಎಲ್ಲರ ಜೀವನ ಬೀದಿಗೆ ಬರುತ್ತೆ ಎಂಬ ಚಿಂತೆ ಜನರದ್ದಾಗಿದೆ.
ಈ ಆತಂಕಕ್ಕೆ ಸಚಿವ ಆರ್ ಅಶೋಕ್ ಧೈರ್ಯ ತುಂಬಿದ್ದಾರೆ. ಯಾರೂ ಕೂಡ ಭಯಪಡಬೇಡಿ. ಸದ್ಯಕ್ಕೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಿಲ್ಲ. ಜನ ಸಹಕಾರ ನೀಡಿದ್ರೆ ಕೋವಿಡ್ ತಡೆಯಬಹುದು. ಕೋವಿಡ್ ಹಿನ್ನೆಲೆ ನಾನು ಸುಧಾಕರ್ ಸಭೆ ನಡೆಸುತ್ತೇವೆ. ಮುಂಜಾಗ್ರತ ಕ್ರಮ ಕೈಗೊಳ್ಳುವುದಕ್ಕೆ ಸಭೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಮೊದಲಿನಂತೆಯೇ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಈ ಮೂಲಕ ಕೋವಿಡ್ ಅನ್ನು ನಿಯಂತ್ರಿಸಬಹುದು. ಬಳಿಕ ಕಟ್ಟುನಿಟ್ಟಿನ ಕ್ರಮದ ಅಗತ್ಯತೆ ಬರುವುದಿಲ್ಲ ಎಂದು ಸೂಚನೆ ನೀಡಿದ್ದಾರೆ.