Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅದ್ದೂರಿಯಾಗಿ ನಡೆದ ಶ್ರೀ ಚೌಡೇಶ್ವರಿ ದೇವಿಯ ಕಡೇ ಕಾರ್ತಿಕ

Facebook
Twitter
Telegram
WhatsApp

ಚಿತ್ರದುರ್ಗ(ಡಿ.24) :  ನಗರದ ದೊಡ್ಡಪೇಟೆಯ ಜೈನ್ ದೇವಾಲಯದ ಹಿಂಭಾಗದ ಜವಳೇರ ಬೀದಿಯಲ್ಲಿ  ಶ್ರೀ ಚೌಡೇಶ್ವರಿ ಅಭಿವೃದ್ದಿ ಸೇವಾ ಸಮಿತಿಯವತಿಯಿಂದ ಶುಕ್ರವಾರ ರಾತ್ರಿ ಶ್ರೀ ಚೌಡೇಶ್ವರಿ ದೇವಿಯ ಕಡೇ ಕಾರ್ತಿಕ ಮಹೋತ್ಸವ ದೀಪರಾಧನೆ ಮತ್ತು ಮಹಾಮಂಗಳಾರತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಭಾಗವಹಿಸಿ ಶ್ರೀ ಚೌಡೇಶ್ವರಿ ದೇವಿಗೆ ಪೂಜೆಯನ್ನು ನೇರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಈ ಭಾಗದ ಜನತೆಗೆ ಕುಡಿಯುವ ನೀರು, ಬೀದಿ ದೀಪ ಮತ್ತು ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡಿಕೊಡಲಾಗಿದೆ.

ಈಗ ದೇವಾಲಯದ ಅಭಿವೃದ್ದಿಗೆ ಧನ ಸಹಾಯವನ್ನು ಕೇಳುತ್ತಿದ್ದಾರೆ. ಆದರೆ ಈಗ ಡಿಸೆಂಬರ್ ಮಾಹೆ ಸಾಗುತ್ತಿದ್ದು ಈಗ ಶಾಸಕರ ನಿಧಿಯಲ್ಲಿ ನೀಡಲು ಹಣ ಇಲ್ಲ ಈಗಾಗಲೇ 4 ಕೋಟಿ ಹಣವನ್ನು ವಿವಿಧ ದೇವಾಲಯಗಳ ಅಭಿವೃದ್ಧಿಗೆ ನೀಡಿದ್ದೇನೆ. ಆಗ ನೀವು ಬಾರಲಿಲ್ಲ ಈಗ ಬಂದಿದ್ದೀರಾ ನಿಮಗೆ ಸುಳ್ಳು ಹೇಳುವುದಿಲ್ಲ. ಈ ಬಾರಿ ಆಗುವುದಿಲ್ಲ ಮುಂದಿನ ಬಾರಿ ನಾನೇ ಶಾಸಕನಾದರೆ ಹಣವನ್ನು ನೀಡುತ್ತೇನೆ ಎಂದು ಭರವಸೆಯನ್ನು ನೀಡಿದರು.

ಮುಂದಿನ ಬಾರಿ ಚುನಾವಣೆಯಲ್ಲಿ ಚೌಡಮ್ಮ ದೇವಿಯ ಆರ್ಶೀವಾದಕ್ಕಿಂತ ಮತದಾರರ ಆರ್ಶಿವಾದ ಅಗತ್ಯವಾಗಿದೆ. ಅವರು ಆರ್ಶೀವಾದ ಮಾಡಿದರೆ ನಾನು ಆಯ್ಕೆಯಾಗಲು ಸಾಧ್ಯವಿದೆ. ಈಗಗಾಲೇ ನಗರದಲ್ಲಿ ಸಿಮೆಂಟ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಇವುಗಳ ಮಧ್ಯೆದಲ್ಲಿ ಗಿಡಗಳನ್ನು ನೆಡಲು ಸುಮಾರು 28000 ಗಿಡಗಳನ್ನು ಬೆಂಗಳೂರಿನಿಂದ ತರಿಸಲಾಗಿದೆ.

ಮುಂದಿನ ದಿನದಲ್ಲಿ ಚಿತ್ರದುರ್ಗವನ್ನು ಸುಂದರ ನಗರವನ್ನಾಗಿ ಮಾಡಲಾಗುವುದು. ಮುಂದಿನ ಬಾರಿ ನಾನೇ ಶಾಸಕನಾಗಿ ಬಂದರೆ ದೇವಾಲಯದ ಅಭೀವೃದ್ದಿಗೆ 10 ಲಕ್ಷ ರೂಗಳನ್ನು ನೀಡುವುದಾಗಿ ಭರವಸೆಯನ್ನು ತಿಪ್ಪಾರೆಡ್ಡಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಚೌಡೇಶ್ವರಿ ಅಭೀವೃದ್ದಿ ಸೇವಾ ಸಮಿತಿಯ ಅದ್ಯಕ್ಷರಾದ ರಾಘವೇಂದ್ರ, ಪದಾಧಿಕಾರಿಗಳಾದ ನಾಗಣ್ಣ, ವಿರೂಪಾಕ್ಷಪ್ಪ, ಬಸವರಾಜು, ಶಂಕರ್, ಗಣೇಶ್ ಯೋಗೀಶ್ ಉಪಸ್ಥಿತರಿದ್ದರು ಕಾರ್ತಿಕ ಮಹೋತ್ಸವದ ಅಂಗವಾಗಿ ನಾಗರೀಕರು ದೀಪಗಳನ್ನು ಹಚ್ಚುವುದರ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕ ಎಸ್. ಶಿವಕುಮಾರ್ ನಿಧನ

    ಸುದ್ದಿಒನ್, ಚಳ್ಳಕೆರೆ, ಮೇ. 07 : ತಾಲ್ಲೂಕಿನ ತಿಮ್ಮಣ್ಣನಹಳ್ಳಿಯ  ಸಿ.ಪಿ. ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ (55 ವರ್ಷ) ಅವರು ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ

ಹಲ್ಲುಜ್ಜದೇ ನೀರು ಕುಡಿತೀರಾ..? ಡೋಂಟ್ ವರಿ ಅದರಿಂದಾನೂ ಆರೋಗ್ಯ ಲಾಭಗಳಿವೆ

ಸುದ್ದಿಒನ್ : ಅನೇಕ ಜನರು ಬೆಳಿಗ್ಗೆ ಹಲ್ಲುಜ್ಜಿದ ನಂತರವೇ ಏನನ್ನಾದರೂ ತಿನ್ನಲು ಅಥವಾ ಕುಡಿಯಲು ಬಯಸುತ್ತಾರೆ. ಹಲ್ಲುಜ್ಜದೆ ನೀರು ಕುಡಿಯುವುದು ಉತ್ತಮವೇ ? ವೈದ್ಯರ ಪ್ರಕಾರ ಒಬ್ಬ ವ್ಯಕ್ತಿಯು ಆರೋಗ್ಯವಾಗಿರಲು ದಿನಕ್ಕೆ 8 ರಿಂದ

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು.

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು. ಮಂಗಳವಾರ ರಾಶಿ ಭವಿಷ್ಯ -ಮೇ-7,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34

error: Content is protected !!