ಮೈಸೂರು: ಪಿರಿಯಾಪಟ್ಟಣ ಶಾಸಕ ಕೆ ಮಹಾದೇವ್ ಬೆಂಬಲಿಗರಿಂದ ದಲಿತ ಮಹಿಳೆಯ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಪಿರಿಯಾಪಟ್ಟಣ ತಾಲೂಕಿನ ಬೆಮ್ಮತ್ತಿ ಗಿರಿಜನ ಹಾಡಿಯ ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಐಲಾಪುರ ಗ್ರಾಮದ ಲೋಕೇಶ್ ಹಾಗೂ ಆತನ ಸಂಬಂಧಿಕನಾದ ಕುಳ್ಳ ಎಂಬುವವರಿಂದ ಈ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಜಯಲಕ್ಷ್ಮಿ, ಲಕ್ಷ್ಮಿ ಮತ್ತು ಶೋಭಾ ಎಂಬುವವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರಂತೆ. ಲೋಕೇಶ್ ಮತ್ತು ಕುಳ್ಳ ಎಂಬುವರು ಜಮೀನಿಗೆ ಹೋಗಿ, ಕಾರಣವೇ ಇಲ್ಲದೆ ಏಕಾಏಕಿ ಹಲ್ಲೆ ಮಾಡಿದ್ದಾರೆ.
ಹಲ್ಲೆಗೆ ಒಳಗಾದ ಮೂವರು ಮಹಿಖೆಯರಿಗೆ ಜೋರು ಪೆಟ್ಟಾಗಿದೆ. ಮೂವರನ್ನು ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಹಲ್ಲೆಕೋರರ ವಿರುದ್ಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.