ಚಿತ್ರದುರ್ಗ.(ಡಿ.9): 220/66/11 ಕೆವಿ ಚಿತ್ರದುರ್ಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ಚಿತ್ರದುರ್ಗ 220/66/11 ಕೆ.ವಿ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳ ಮಾರ್ಗ ಮುಕ್ತತೆಯನ್ನು ನೀಡಬೇಕಾಗಿರುವುದರಿಂದ ಡಿಸೆಂಬರ್ 10ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಕಾಪರ್ ಮೈನ್ಸ್, ಕ್ಯಾದಿಗೆರೆ, ಜೆ.ಎನ್.ಕೋಟೆ, ಕಾಸವರಹಟ್ಟಿ, ಪಲ್ಲವಗೆರೆ, ಕೈಗಾರಿಕಾ ಪ್ರದೇಶ, ಕೋಟೆ, ಜಿಲ್ಲಾ ಪಂಚಾಯತ್, ಸಜ್ಜನಕೆರೆ, ದಂಡಿನಕುರುಬರಹಟ್ಟಿ, ಕೆನ್ನೆಡಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.