ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಜಯಭೇರಿ ಬಾರಿಸಿ, 15 ವರ್ಷಗಳಿಂದ ಬೇರುಬಿಟ್ಟಿದ್ದ ಬಿಜೆಪಿಯನ್ನು ಕೆಳಗಿಳಿಸಿ,ಆಪ್ ಜಯಭೇರಿ ಬಾರಿಸಿದೆ.
ಹೊಸದಾಗಿ ಆಯ್ಕೆಯಾದ ತಮ್ಮ ಪಕ್ಷದ ಕೌನ್ಸಿಲರ್‌ಗಳನ್ನು ಬಿಜೆಪಿ ಕೊಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಬಿಜೆಪಿಯವರ ಆಟ ಶುರುವಾಗಿದೆ. ಹೊಸದಾಗಿ ಆಯ್ಕೆಯಾದ ನಮ್ಮ ಕಾರ್ಪೊರೇಟರ್‌ಗಳಿಗೆ ಈಗಾಗಲೇ ದೂರವಾಣಿ ಕರೆಗಳು ಬರಲಾರಂಭಿಸಿವೆ. ನಮ್ಮ ಯಾವುದೇ ಕೌನ್ಸಿಲರ್‌ಗಳು ಮಾರಾಟವಾಗುವುದಿಲ್ಲ. ಎಲ್ಲಾ ಕಾರ್ಪೊರೇಟರ್‌ಗಳಿಗೆ ಫೋನ್ ಕರೆ ಬಂದರೆ ಅಥವಾ ಯಾರಾದರೂ ಅವರನ್ನು ಭೇಟಿ ಮಾಡಲು ಬಂದರೆ ರೆಕಾರ್ಡ್ ಮಾಡುವಂತೆ ನಾವು ಹೇಳಿದ್ದೇವೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಎಎಪಿ 250 ಸ್ಥಾನಗಳಲ್ಲಿ 134 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ 104 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2015 ರಲ್ಲಿ AAP ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಮೊದಲ ಸರ್ಕಾರವನ್ನು ರಚಿಸಿದಾಗಿನಿಂದ ಎರಡು ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇವೆ.