ಚಿತ್ರದುರ್ಗ : ದೇಶವು ಮುಂದುವರಿಯಬೇಕೆಂದರೆ ಏಡ್ಸ್ ತರಹದ ಮಾರಕ ರೋಗಗಳು ದೂರವಾಗಬೇಕು ಅದು ದೂರವಾಗಬೇಕೆಂದರೆ ಜನರಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗಾಗಿ ಇದರಲ್ಲಿ ಶಿಕ್ಷಣದ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ ಎಸ್ ದಿವಾಕರ್ ಹೇಳಿದರು.
ಅವರು ನಗರದ ಹೊರವಲಯದ ಎಸ್.ಆರ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾಯೋಜನೆ ಘಟಕಗಳ ಸಹಭಾಗಿತ್ವದಲ್ಲಿ ಏಡ್ಸ್ ಎಂಬ ಮಾರಕ ರೋಗದ ಬಗ್ಗೆ ಜಾಗೃತಿ ಮೂಡಿಸುವ “ವಿಶ್ವ ಏಡ್ಸ್ ದಿನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಆರ್.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ರವಿ ಟಿ.ಎಸ್. ಅವರು ಮಾತನಾಡಿ, ಏಡ್ಸ್ ಖಾಯಿಲೆ ಬಂದವರು ಮಾನಸಿಕವಾಗಿ, ಆರ್ಥಿಕವಾಗಿ, ಸಾಮೂಹಿಕವಾಗಿ ಕುಗ್ಗಿ ಹೋಗುತ್ತಾರೆ ಹಾಗಾಗಿ ಈ ಖಾಯಿಲೆಯನ್ನು ತಡೆಯುವ ಮಾರ್ಗವೆಂದರೆ ಸುರಕ್ಷತೆ ಮತ್ತು ತಿಳಿವಳಿಕೆ ಹೊಂದಿರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಗಿರೀಶ್ ಬಿ.ಕೆ.ಮಾತನಾಡುತ್ತಾ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾನೂನು ಹೇಗೆ ಎಲ್ಲಾ ಜನರಿಗೂ ಒಂದೇ ರೀತಿ ಅನ್ವಯವಾಗುತ್ತದೆಯೋ, ಹಾಗೆಯೇ ನಾವು ಏಡ್ಸ್ ರೋಗಿಗಳನ್ನು ಬೇರೆ ರೋಗಿಗಳ ರೀತಿಯಲ್ಲಿ ಸಮಾನವಾಗಿ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಡಾ.ಸುಧಾ ಸಿ ಓ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು, ಜಿಲ್ಲಾ ಏಡ್ಸ್ ನಿಯಂತ್ರಣ & ತಡೆ ಘಟಕ, ಚಿತ್ರದುರ್ಗ ಇವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ವೇದಿಕೆಯಲ್ಲಿರುವ ಗಣ್ಯರಿಂದ ಈ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಆಯ್ದ ಹನ್ನೊಂದು ಜನರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಸಾಧನ ಎ ಜಿ. ಶ್ರೀಕಾಂತ್ ಟಿ ಎನ್, ಡಾ ರೂಪಶ್ರೀ ವೈದ್ಯಾಧಿಕಾರಿಗಳು, ಡಾ ಗೋವಿಂದಪ್ಪ ಹಾಗೂ ಎಸ್.ಆರ್.ಎಸ್. ಪ್ರಥಮ ದರ್ಜೆ ಕಾಲೇಜು ಚಿತ್ರದುರ್ಗ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.